Pages

Saturday, August 9, 2014

Swami Laali

ಸ್ವಾಮಿ ಲಾಲಿ ಭಕ್ತ ಪ್ರೇಮ ಲಾಲಿ
ಕಾವ ಎನಿಪ  ಗುರುಸಾರ್ವಭೌಮ ಲಾಲಿ।। 

ಇಂದ್ರ ಲಾಲಿ ರಾಘವೇಂದ್ರ ಲಾಲಿ 
ಸಾಂದ್ರ ಭಕ್ತ  ಕುಮುದ  ಪೂರ್ಣಚಂದ್ರ ಲಾಲಿ ।।

ಧರಣಿ ಲಾಲಿ ನಿಜ ಕರುಣಿ ಲಾಲಿ 
ಶರಣ ಜನರ ಕಾಯುವ  ಪೂರ್ಣ ಲಾಲಿ ।।

ದೇವ ಲಾಲಿ ನಿಜ ಭಾವ ಲಾಲಿ 
ಭಾವಿಸುವರ ನಿತ್ಯ ನೀ ಕಾವ ಲಾಲಿ ।।

ರಾಜ ಲಾಲಿ  ಕಲ್ಪಭುಜ ಲಾಲಿ 
ರಾಜಿಸುವ ಯತಿಕುಲದ  ತೇಜ ಲಾಲಿ ।।

ದಾಸ ಲಾಲಿ ನಿಜ  ದಾಸ ಲಾಲಿ 
ಪ್ರೀತಿ ಗುರು ಜಗನ್ನಾಥ ವಿಠಲ ಧೂತ ಲಾಲಿ ।।ಸ್ವಾಮಿ ಲಾಲಿ।।

No comments :

Post a Comment