ರಾಘವೇಂದ್ರ ಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ
ಮಾಘಧರಿಪುಮತ ಸಾಗರ ಮೀನ ಮಹಾಘ ವಿನಾಶನ ನಮೋ ನಮೋ || ಪ ||
ಶ್ಲಾಗಿತ ಗುಣಗಣ ಸೂರಿ ಪ್ರಸಂಗ ಸದಾಗಮಜ್ಞ ತೇ ನಮೋ ನಮೋ
ಮೇಘ ಶ್ಯಾಮಲ ರಾಮಾರಾದಕ ಮೋಘ ಬೋಧ ತೇ ನಮೋ ನಮೋ ||ಅ . ಪ ||
ತುಂಗಭದ್ರ ಸುತರಂಗಿಣಿ ತೀರಗ ಮಂಗಳ ಚರಿತ ಶುಭಾಂಗ ನಮೋ
ಇಂಗಿತಜ್ಞ ಕಾಳಿಂಗ ಮರ್ಧನ ಯದುಪುಂಗವ ಹೃದಯ ತುರಂಗ ನಮೋ ||
ಸಂಗಿರ ಚಿಹ್ನಿತ ಶೃಂಗಾರಾನನ ತಿಂಗಳ ಕರುಣಾಪಾಂಗ ನಮೋ
ಗಾಂಗೇಯ ಸಮ ಭಾಂಗ ಕುಮಟ ಮಾತಂಗ ಸಂಘ ಶಿತಪಿಂಗ ನಮೋ ||೧||
ಶ್ರೀ ಸುಧೀಂದ್ರ ಕರಜಾತ ನಮೋ ನಮೋ ಭೂಸುರ ವಿನುತ ವಿಖ್ಯಾತ ನಮೋ
ದೇಶಿಕ ವರ ಸಂಸೇವ್ಯ ನಮೋ ನಮೋ ದೋಷ ವಿವರ್ಜಿತ ಕಾವ್ಯ ನಮೋ ||
ಸನ್ನುತ ಮಹಿಮ ಶ್ರೀ ಜಗನ್ನಾಥ ವಿಠಲ ಸಹ್ನಿತ ಮಾನಸ ಜಯ ಜಯ ಭೋ
ಚಿಹ್ನಿತ ದಂಡ ಕಮಂಡಲ ಪುಂಡ್ರ ಪ್ರಪನ್ನ ಭಯಾಪಹ ಜಯ ಜಯ ಭೋ ||
ಮಾನ್ಯ ಮಹಾತ್ಮಾ ಪ್ರಸನ್ನ ವದನ ಕಾರುಣ್ಯಪಯೋನಿಧಿ ಜಯ ಜಯ ಭೋ
ಧನ್ಯ ಕ್ಷಮಾ ಸಂಪನ್ನಧರಾಮರ ಶರಣ್ಯ ಸದಾರ್ಚಿತ ಜಯ ಜಯ ಭೋ ||೨||
No comments :
Post a Comment