Pages

Sunday, April 6, 2014

Vani Parama Kalyani

ವಾಣಿ ಪರಮ ಕಲ್ಯಾಣಿ ನಮೋ ನಮೋ ।
ಅಜನ ರಾಣಿ ಪಂಕಜಪಾಣಿ ।। ವಾಣಿ ।।


ಫಳಿರೆ  ಫಳಿರೆಯೆಂಬೆ  ಭಕ್ತಜನ ಸುಖದಾಂಬೆ
ಸುಳಿದಾಡು ಶುಭಾನಿತಂಬೆ  ಅಂಬೇ ..... ।
ಹೊಳೆ ಹೊಳೆವ ಮುಖ ಮುಕುರಬಿಂಬೆ
ಇಳೆಯೊಳಗೆ ಸರಿಗಾಣೆ  ಶಾರದಾಂಬೆ ಪುತ್ಥಳಿಗೊಂಬೆ ।।ವಾಣಿ ।।

ಶರಣು ಶರಣಲೇ  ದೇವಿ ಸ್ಮರಣೆಮಾತ್ರದಿ ಕಾಯ್ವೆ
ಚರಣದಂದುಗೆ  ಕೀವಿ ಮೆರೆವೆ ವಾಗ್ದೇವಿ ।
ನಲಿನಲಿವಾಭರಣಗಳ  ಧರಿಸಿ ನಟಿಸುವಿ ದೇವಿ
ಇಳೆಯೊಳಗೆ ಹರಿಣಾಕ್ಷಿ  ಸಲಹು ಕಾಮಾಕ್ಷಿ ।।ವಾಣಿ ।।

ಜಯ ಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆ
ದಯಮಾಡುದವಳಗೀತೆ  ಮಾತೇ ..... ।
ನಿನ್ನಿಂದ ವಿದ್ಯೆ ಬುದ್ಧಿ ಅರಿಯೊಲುವೇ  ಅಮ್ಮ
ನಿನ್ನ ನಂಬಿದೆ ತಾಯೇ  ನೀ  ಬಂದು ಕಾಯೇ ।
ಸತತ ಶ್ರೀ ಹಯವದನ  ಪದ ಸೇವಕ ಪ್ರೀತೆ
ಕ್ಷಿತಿಯೊಳಗೆ ಲಯದಿಂದ ತೆಳಿಸೆನ್ನ  ವಿಧಿಜಾತೆ ।।ವಾಣಿ ।।

Audio  Link :

http://www.saavn.com/s/song/kannada/Sharade/Vani_Parama_Kalyani/RwAFVwJ7fWU

No comments :

Post a Comment