Pages

Sunday, April 6, 2014

Baaro namma manege

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ   ।ಪ ।
ಬಾರೋ ದುಃಖಾಪಹಾರ  ಬಾರೋ ದುರಿತದೂರ
ಬಾರಯ್ಯ  ಸನ್ಮಾರ್ಗ  ದಾರಿ ತೋರುವರು ।।ಬಾರೋ ॥
                                                         
ಬಾಲ ಪ್ರಹ್ಲಾದನಾಗಿ  ಖೂಳ  ಕಶ್ಯಪುವಿಗೆ
ಲೋಲ ಶ್ರೀ ನರಹರಿ  ಕಾಲರೂಪನ ತೋರ್ವ ।।ಬಾರೋ ।।
                                                              

ವ್ಯಾಸ ನಿರ್ಮಿತ ಗ್ರಂಥ  ಮಧ್ವಕೃತ ಭಾಷ್ಯವ
ಬೇಸರದಿ  ಓದಿ ಮೆರೆವ ವ್ಯಾಸಮುನಿಯೇ ।।ಬಾರೋ ।।
                                                           
ಮಂತ್ರ ಗೃಹದಲಿ ನಿಂತ  ಸುಯತಿವರ್ಯ
ಅಂತ ತಿಳಿಯದೋ  ನೀ  ಅಂತರದೊಳು ।
ಭೂತಪ್ರೇತಗಳ ಘಾತಿಸಿ ಬಿಡುವಂತ
ಖ್ಯಾತಿಯುತ  ಶ್ರೀನಾಥನ  ಸ್ತುತಿಸುವೆ।।ಬಾರೋ ।।
                                                              
ಕುಷ್ಟರೋಗಾದಿಗಳ  ನಷ್ಟ ಮಾಡುವಂತ
ಅಷ್ಟ ಮಹಿಮೆಯುತ ಶ್ರೇಷ್ಠ  ಮುನಿಯೇ ।
ಕರೆದರೆ ಬರುವೆಂಬ  ಕೀರುತಿ ಕೇಳಿ ನಾ
ಕರೆದನೋ ಕರುಣದಿ  ಕರವ ಪಿಡಿಯೋ ।।ಬಾರೋ ।।

ಭಕ್ತವತ್ಸಲನೆಂಬ ಬಿರಿದಿಂದಾದರೆ
ಭಕ್ತನ ಮೊರೆ ಕೇಳೋ ಮಧ್ವೇಶ ವಿಠಲದಾಸ ।।ಬಾರೋ ।।

ಆಡಿಯೋ ಲಿಂಕ್ :
baaro namma manege_song6

No comments :

Post a Comment