Pages

Thursday, April 10, 2014

Krishna nI bEganE bArO

ರಚನೆ : ವ್ಯಾಸರಾಯ
ತಾಳ : ಛಾಪು
ರಾಗ : ಯಮುನಾ ಕಲ್ಯಾಣಿ


ಕೃಷ್ಣ ನೀ ಬೇಗನೆ  ಬಾರೋ ।

                                            ।।ಪ।।

ಬೇಗನೆ ಬಾರೋ ಮುಖವನ್ನೇ ತೋರೋ ।

                                            ।।ಅ . ಪ .।।


ಕಾಲಾಲಂದುಗೆ   ಗೆಜ್ಜೆ  ನೀಲದ ಬಾವುಲಿ
ನೀಲವರ್ಣನೆ ನಾಟ್ಯವಾಡುತ  ಬಾರೋ ।। ಕೃಷ್ಣ ।।


ಉಡಿಯಲ್ಲಿ  ಉಡಿಗೆಜ್ಜೆ  ಬೆರಳ್ಳಲ್ಲಿ  ಉಂಗುರ
ಕೊರಳಲ್ಲ್ಲಿ ಹಾಕಿದ ವೈಜಯಂತಿ  ಮಾಲೆ ।। ಕೃಷ್ಣ ।।


ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ ।।ಕೃಷ್ಣ ।।


ತಾಯಿಗೆ ಬಾಯಲ್ಲಿ ಜಗವನ್ನೇ  ತೋರಿದ
ಜಗದೋದ್ಧಾರಕ  ನಮ್ಮ ಉಡುಪಿ ಶ್ರೀ ಕೃಷ್ಣ ।।ಕೃಷ್ಣ ।।




No comments :

Post a Comment