Pages

Monday, March 24, 2014

Ramaa Samudrana

ರಚನೆ : ಶೇಷವಿಠಲ  ದಾಸರು
ರಾಗ : ಶುದ್ಧ  ಸವೇರಿ



ರಮಾ  ಸಮುದ್ರನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ  ।।ಪ ।।

ಉಮೇಶ ಮೊದಲಾದ ಅಮರನಿಖರವೋ  ನಮಿಸಿ ಭ್ರಮಿಸಿ ನಿಮ್ಮ ಚರಣ ಭಜಿಸುವ ।। ಅ . ಪ ।।

ಅಪಾರಮಹಿಮನ  ವ್ಯಾಪಾರಂಗಳ  ತಿಳಿದು ಕಾಪಡಲೇ  ಜಗವ ।
ಕೋಪಾರಹಿತಳಾಗಿ  ಶ್ರೀಪತಿಯೊಳು  ನಮ್ಮ ತಾಪತ್ರಯವ ಪೇಳಿ  ಪೋಷಿಸಬೇಕೆಂದು ।।೧।।   ।।ರಮಾ।।


ಕರುಣಾ  ವಾರಿಧಿಯೆಂದು  ಶರಣಜನರು  ನಿಮ್ಮ ಸ್ಮರಣೆಯ  ಮಾಡುತಿಹರೆ ।
ಮರಣ ಕಾಲದಿ  ಅಘಹರಣಗೊಳಿಸಿ  ನಮ್ಮ ಕರುಣದಿಂದಲಿ  ನಿಮ್ಮ ಚರಣದೊಳಿರಿಸಮ್ಮ ।।೨।।   ।।ರಮಾ।।


ವಾಸವಂದಿತ ಸಿರಿ  ಶೇಷವಿಠಲನೊಳು  ವಾಸವ  ಮಾಡುತಿಹರೆ ।
ಘಾಸಿಪಡಿಪನಮ್ಮ  ಈ ಸಮದಲಿ ವಾಸವಾತ್ಮಗೆ  ಪೇಳಿ  ಪೋಷಿಸಬೇಕೆಂದು ।।೩।।        ।।ರಮಾ।। 

No comments :

Post a Comment