Pages

Monday, March 24, 2014

Kusuma Maaleya

ಕುಸುಮ ಮಾಲೆಯ ತನ್ನಿರೇ  ಶ್ರೀ ದೇವಿ ವಿಜಯಲಕ್ಷ್ಮೀಗೆ ।ಪ।
ಕುಂಕುಮಾರ್ಚನೆ  ಮಾಡಿರೇ  ಶ್ರೀ ಕ್ಷೀರಸಾಗರ  ತನಯಗೆ ।।ಅ . ಪ।।

ಆರಂಗ ರಂಜನಿ ವಿಷ್ಣು ಮೋಹಿನಿ ಚಕ್ರಿಣಿ ಶುಭದಾಯಿನಿ ...
ಗರುಡವಾಹನ  ಹರಿಯರಾಣಿಯೇ  ಮಂದಗಾಮಿನಿ ಮಾನಿನಿ।
ಕಲ್ಪವೃಕ್ಷದ ಜೊತೆಗೆ ಹುಟ್ಟಿದ ಕಮಲಿನಿ ಕಮಲಾಸಿನಿ
ಚಂದ್ರವದನೇ  ಚಂದ್ರಕಾಂತಿಯ  ಚಂದಿರನ ನಿಜ ಸೋದರಿ ।।೧।।    ।।ಕುಸುಮ।।


ನದಿಯ  ಆಡಿ  ಬರುವ ಮಂದಮಾರುತ ಹೂನಗೆ ....
ಕಮಲನಾಭನ  ಕೈಯ  ಹಿಡಿದ ಕರುಣೆ ಕಾಮಾಲೆ ಕೋಮಲೆ ।
ಮಿಂಚುಬಳ್ಳಿಯ  ವೇಗದಿಂದಲಿ ನೋಟ ಬದಲಿಸೋ ಚಂಚಲೆ
ಎಂದು ನಮ್ಮನು ಮಕ್ಕಳಂದದಿ  ಪೊರೆಯೆ  ಮಾತೆಯೇ ಮಂಗಳೇ ।।೨।।    ।।ಕುಸುಮ।।


ಮನದೇ  ಧೈರ್ಯವ ತುಂಬಿಸಿ ಮುನ್ನಡೆವಲು  ನೀ  ಕರುಣಿಸೇ
ಬಿಡದೆ ಸಾಹಸ ಹಿಡಿದ ಕಾರ್ಯಾವ ಸಾಧಿಸೋ ಛಲ ತುಂಬಿಸೇ ।
ಜಯದ ಮಾಲೆಯ ಕೊರಳಿಗೆಂದು  ನೀಡಿ ನೀ ಪರಿಪಾಲಿಸೇ
ವಿಜಯಲಕ್ಷ್ಮಿಯೇ  ನಿನ್ನ ಪಾದದೇ  ಬೇಡುವೆ ಪಥ  ತೋರಿಸೇ ।।೩।।     ।।ಕುಸುಮ।।

No comments :

Post a Comment