Pages

Thursday, January 2, 2014

SuryaKavacha Stotra



ಯಾಜ್ಞವಲ್ಕ್ಯ  ಉವಾಚ ।

ಶೃಣುಷ್ವ  ಮುನಿಶಾರ್ದೂಲ , ಸೂರ್ಯಸ್ವ ಕವಚಂ  ಶುಭಂ ।
ಶರೀರರೋಗ್ಯದಂ  ದಿವ್ಯಂ ಸರ್ವಸೌಭಾಗ್ಯದಾಯಕಮ್  ।।೧।।

ದೇದೀಷ್ಯಮಾನಮುಕುಟಂ , ಸ್ಫುರನ್  ಮಕರ ಕುಂಡಲಂ ।
ಧ್ಯಾತ್ವಾ  ಸಹಸ್ರ ಕಿರಣಂ  ಸ್ತೋತ್ರಮೇತದುದೀರಯೇತ್ ।।೨।।

ಶಿರೋ ಮೇ  ಭಾಸ್ಕರಃ  ಪಾತು ,ಲಲಾಟಂ  ಮೇಮಿತದ್ಯುತಿಃ ।
ನೇತ್ರೆ  ದಿನಮಣಿಃ  ಪಾತು , ಶ್ರವಣೆ  ವಾಸರೇಶ್ವರಃ ।।೩।।

ಘ್ರಾಣಂ ಧರ್ಮಘ್ರುಣಿಃ  ಪಾತು ,ವದನಂ  ವೇದ ವಾಹನಃ ।
ಜಿಹ್ವಾಂ ಮೇ   ಮಾನದಃ  ಪಾತು , ಕಂಠಮ್  ಮೇ  ಸುರವಂದಿತಃ ।।೪।।

ಸ್ಕಂದೌಪ್ರಭಾಕರಃ  ಪಾತು , ವಕ್ಷಃ ಪಾತು ಜನಪ್ರಿಯಃ ।
ಪಾತು ಪಾದೌ ದ್ವಾದಶಾತ್ಮಾ , ಸರ್ವಾಂಗಃ  ಸಕಲೇಶ್ವರಃ ।।೫।।

ಸೂರ್ಯ ರಕ್ಷಾಕರಂ  ಸ್ತೋತ್ರಂ , ಲಿಖಿತ್ವಾ  ಭೂರ್ಜ  ಪತ್ರಿಕೆ ।
ದದಾತಿ ಯಃ ಕರೆ ತಶ್ಯಾವಶಗಾಃ  ಸರ್ವಸಿದ್ಧಯಃ ।।೬।।

ಸುಸ್ನಾತೊಯೋ  ಜಪೇತ್ಸಮ್ಯಗ್ಯೋsಧೀತೆ  ಸ್ವಸ್ಥ  ಮಾನಸಃ ।
ಸ ರೋಗಮುಕ್ತೋ  ಧೀರ್ಘಾಯುಃ , ಸುಖಂ  ಪುಷ್ಟಿಶ್ಚ  ವಿಂದತಿ ।।೭।।


ಇತಿ ಶ್ರೀಮದ್ಯಾಜ್ಞವಲ್ಕ್ಯ  ವಿರಚಿತಂ ಸೂರ್ಯಕವಚ ಸ್ತೋತ್ರಂ ಸಂಪೂರ್ಣಂ


ಭಾವಾರ್ಥ :

ಯಾಜ್ಞವಲ್ಕ್ಯರು  ಹೇಳಿದ್ದು -

ಕೇಳೈ  ಮುನಿಶಾರ್ದೂಲನೆ , ಶುಭಪ್ರದವೂ ಶರೀರಕ್ಕೆ ಆರೋಗ್ಯವನ್ನು  ಕೊಡತಕ್ಕದ್ದು ದಿವ್ಯವೂ ಮತ್ತು ಎಲ್ಲ ಸೌಭಾಗ್ಯಗಳನ್ನು ಕೊಡತಕ್ಕದ್ದೂ   ಆದ ಸೂರ್ಯಕವಚವನ್ನು ।।೧।।

ಒಳ್ಳೆ ದೀಪ್ತಿಮಂತವಾದ ಮುಕುಟವನ್ನು ಧರಿಸಿದವನೂ  ಹೊಳೆಯುವ ಮೀನಿನಾಕಾರದ ಕುಂಡಲಗಳುಳ್ಳವನೂ  ಆದ ಸಾವಿರ  ಕಿರಣಗಳುಳ್ಳವ (ಸೂರ್ಯ )ನನ್ನು  ಧ್ಯಾನಿಸಿ , ಈ  ಸ್ತೋತ್ರವನ್ನು ಪಠಿಸಬೇಕು ।।೨।।

ಶಿರವನ್ನು  ಭಾಸ್ಕರನೂ  ಹಣೆಯನ್ನು ಅಮಿತದ್ಯುತಿಯೂ , ಕಣ್ಣುಗಳನ್ನು ದಿನಮಣಿಯೂ  ಕಿವಿಗಳನ್ನು ವಾಸರೇಶ್ವರನೂ ಸಂರಕ್ಷಿಸಲಿ  ।।೩।।

ಮೂಗನ್ನು ಧರ್ಮ ಘ್ರುಣಿಯೂ  ಬಾಯಿಯನ್ನು ವೇದವಾಹನನೂ  ನಾಲಿಗೆಯನ್ನು ಮಾನದನೂ ಕಂಠವನ್ನು  ಸುರವಂದಿತನೂ
ಕಾಪಾಡಲಿ ।।೪।।

ಹೆಗಲುಗಳನ್ನು  ಪ್ರಭಾಕರನೂ  ಎದೆಯನ್ನು  ಜನಪ್ರಿಯನೂ ಪಾದಗಳನ್ನು  ದ್ವಾದಶಾತ್ಮನೂ  ಸರ್ವಾಂಗವನ್ನು  ಸಕಲೇಶ್ವರನೂ  ಕಾಯಲಿ ।।೫।।

ಸೂರ್ಯ ರಕ್ಶಾತ್ಮಕವಾದ ಈ ಸ್ತೋತವನ್ನು  ಭೂರ್ಜ  ಪತ್ರದಲ್ಲಿ ಬರೆದು ಯಾವನು ಕೈಯಲ್ಲಿ ಕಟ್ಟಿ ಕೊಳ್ಳುವನೋ  ಅವನಿಗೆ ಎಲ್ಲ ಸಿದ್ಧಿಗಳೂ  ವಶವಾಗುವವೂ ।।೬।।

ಒಳ್ಳೆ ಬಗೆಯಾಗಿ ಸ್ನಾನ ಮಾಡಿ , ಸ್ವಸ್ಥವಾದ ಮನದಿಂದ ಯಾವನು ಚೆನ್ನಾಗಿ ಜಪಿಸುವನೋ , ಕಲಿಯುವನೋ , ಅವನು ರೋಗಮುಕ್ತನಾಗಿ ಧೀರ್ಘಾಯುವಾಗುವನು  ಮತ್ತು ಸುಖವನ್ನೂ  ಪುಷ್ಟಿಯನ್ನು  ಹೊಂದುವನು ।।೭।।

No comments :

Post a Comment