Pages

Saturday, August 24, 2013

Sridevi Vaagdevi


ಶ್ರೀದೇವಿ  ವಾಗ್ದೇವಿ ಜಯಗೌರಿ ।      [ಪ]
ಸರಿಸಾಟಿ ನಿನಗಿಲ್ಲ ದೈವಗಳದೈವ  ಶ್ರೀದೇವಿ ....।।         [ಅ. ಪ]



ಪಾಲ್ಗಡಲ ಶ್ರೀನಿಧಿಯೇ ಹೃತ್ಕಮಲ  ವಾಸಿ
ಫಲಬಗೆಯ  ಸಿರಿತನಕ್ಕೆ  ಸಿರಿಯೇ ನೀನಮ್ಮ ।
ಕುಲದೇವಿ  ನೀನೆಂದು .....ಅ...... ಅ.... ಬೇಡುವೆ ನಿನ್ನ
ಕುಲಕ್ಕಾಗಿ ಐಸಿರಿಯ ವರನೀಡು  ತಾಯಿ ।।

                                                            [ಶ್ರೀದೇವಿ]


ಶೃತಿಯಾಗಿ ವೀಣೆಯಲಿ ಗತಿಯಾಗಿ ಬಾಳಲ್ಲಿ
ಸತಿಯಾಗಿ ಪೊರೆಯುತಿಹ  ಬ್ರಹ್ಮನರಸಿ ।
ಹಿತವಾದ ನುಡಿ  ಕಲಿಸಿ ಮತಿವಂತಳಾಗಿಸುತ
ಪತಿ ಸೇವೆ ಕರುಣಿಸು ಉಸಿರಿರುವತನಕ ।।

                                                             [ಶ್ರೀದೇವಿ ]


ಪರಶಿವನ ಅರ್ಧಾಂಗಿ ಪತಿತ ಪಾವನೆ ಗೌರಿ
ಅರಿತವರ ಬಾಳಿನಲಿ  ನೀನೆ ಪಾವನ ಗಂಗೆ ।
ಕರಗುವುದು ನೀನೊಲಿಯೇ  ದುರಿತಗಳೆಲ್ಲಾ
ಪರಿಹರಿಸಿ  ದುಗುಡವನು ಮುತೈದೆತನ ನೀಡು।।

                                                                 [ಶ್ರೀದೇವಿ]


Youtube  Link :



No comments :

Post a Comment