Pages

Tuesday, August 27, 2013

Brundaavani Devi


ಬೃಂದಾವನೀ  ದೇವಿ ವಂದಿಸುವೆ ಶ್ರೀತುಳಸಿ  ಮಂದಿರಳೆ  ನಿನ್ನ ಪದಕೆ
ವಂದಾರುಜನಸತಿಗೆ  ಮಂದಾರಳೆನಿಸಿರುವಿ  ಸಂದೇಹವಿಲ್ಲವಿದಕೆ।।

ಅಂದು ಧನ್ವಂತರಿಯು  ತಂದಿರುವ ಪೀಯೂಷದಿಂದ  ಪೂರಿತ ಕಳುಶದಿ
ಇಂದಿರಾಪತಿಯು  ಆನಂದಭಾಷ್ಪೋದಕವ  ಬಿಂದು ಬೀಳಲು  ಜನಿಸಿದಿ ।
ಶ್ರೀತುಳಸಿ ನಿನ್ನನು  ನಿಕೇತನದಿ  ಪೂಜಿಪರ  ಪಾತಕವ ಪರಿಹರಿಸುವೆ
ಶ್ರೀತರುಣಿಪತಿಗೆ  ಬಲು ಪ್ರೀತೆವಿಷಯಳೇ  ನಿನ್ನ ನಾ  ಸ್ತುತಿಸಲೆಂತು  ಜನನಿ ।
ಸರ್ವತೀರ್ಥಗಳೆಲ್ಲ  ತರುಮೂಲದಲ್ಲಿಹವು  ಸರ್ವವಿಭುದರು  ಮಧ್ಯದಿ
ಸರ್ವವೇದಗಳೆಲ್ಲ  ಸರ್ವಗ್ರ  ಭಾಗದಲಿ ಇರುತಿಹರು  ಬಿಡದೆ ನಿರುತ ।
ತುಳಸಿ ನಿನ್ನಯ ಲಕ್ಷದಳದಲಿಂದಲಿ  ಲಕ್ಷ್ಮೀನಿಲಯದಲಿದಳರ್ಚಿಸೆ
ಕಳುಶಗಳ  ಜೊತೆ ಮಾಡಿ ಬಲುಬೇಗ ಶ್ರೀಹರಿಯ ಒಲುಮೆ ಪಡೆವನು  ಜಗದೊಳು ।
ತುಳಸಿ ದೇವಿಯೇ ನಿನಗೆ ಜಲವೆರೆದು ಕುಂಕುಮದ ತಿಲಕವಿಡುತಲಿ  ನಿತ್ಯದೀ
ಲಲನೆಯರು  ಪೂಜಿಸಲು ಒಲಿದಿತ್ತು ಸೌಭಾಗ್ಯ ಸಲಹುವೆ ಕರುಣದಿಂದ ।
ಮಾಧವಪ್ರಿಯ  ತುಳಸಿ ಸಾದರದಿ  ನಿನ್ನೊಳಗೆ ಶ್ರೀದೇವಿ ನಿಂದಿರುವಳು
ಮೋದಮುನಿ  ಶಾಸ್ತ್ರಿಗಳು ಭೋದಿಸುವ ಬುಧಜನರು ಪಾದಸೇವೆಯಾ  ಕರುಣಿಸು ।
ಮಿತ್ರನುದಯಲೆದ್ದು ಚಿತ್ತನಿರ್ಮಲನಾಗಿ  ಭಕ್ತಿಯಲಿ ಶ್ರೀ ತುಳಸಿಯಾ
ಮೃತ್ತಿಕೆಯ ಧರಿಸಿದ ಮಹಾತ್ಮರನು ಕಂಡು ಯಮಭೃತ್ಯರಂಜುವರು  ಭಯದಿ ।
ಇಂದು ಶ್ರೀ ತುಳಸಿ ಶ್ರೀಮಂತಿನಿಯ ಸ್ತೋತ್ರವ ನಿರಂತರದಿ  ಪಠಿಸುವವರ
ಚಿಂತಿತಾಪ್ರದನಾಗಿ  ನಿಂತು ಕಾರ್ಪರದಿ  ಕಾಂತ ನರಹರಿ  ತಾ  ಪೊರೆವನು ।

ಬೃಂದಾವನೀ  ದೇವಿ ವಂದಿಸುವೆ ಶ್ರೀತುಳಸಿ  ಮಂದಿರಳೆ  ನಿನ್ನ ಪದಕೆ

ವಂದಾರುಜನಸತಿಗೆ  ಮಂದಾರಳೆನಿಸಿರುವಿ  ಸಂದೇಹವಿಲ್ಲವಿದಕೆ।।


No comments :

Post a Comment