ಅಲಂಕಾರ ಪ್ರಿಯ ವಿಷ್ಣು ತನಯನೇ
ಅಭಿಷೇಕ ಪ್ರಿಯ ಶಿವಸುತ ನೀನೆ ।।
ಅಸುರ ಮರ್ದನ ಅತಿ ಬಲಾಢ್ಯನೇ
ಮಾಡುವೆ ನಿನಗೆ ಪಾದಾಭಿವಂದನೆ ।।ಅಲಂಕಾರ।।
ಮುತ್ತು ಮಾಣಿಕ್ಯ ರತ್ನದಾಭರಣ
ಪಟ್ಟೆ ಪಿತಾಂಬರ ಅಲಂಕಾರ ಸಾಧನ ।।
ಪನ್ನೀರು ಪರಿಮಳಾದಿ ದ್ರವ್ಯಗಳನು
ಸ್ವೀಕರಿಸುತ್ತಿಹೆ ಅನುದಿನ ನೀನು ।।ಅಲಂಕಾರ।।
ಕಸ್ತೂರಿ ಕರ್ಪೂರ ಅಗರು ಚಂದನ
ಎಲ್ಲಾ ಸುಗಂಧಾದಿ ಲೇಪನ ।।
ಪಡೆಡಿಹೆ ಯೋನಿ ವೇದೋಕ್ತ ರೀತಿ
ಮೂರ್ತಿ ಬಯಲು ಪಡೆಯುವ ರೀತಿ ।।
ಕ್ಲೇಶವ ನೀಗುವ ಸ್ವಾಮಿಯು ನೀನು
ಪಾಶಕೆ ಸಿಲುಕಿದ ಮನುಜನು ನಾನು ।।
ಕ್ಲೇಶ ಪಾಶವ ನೀಗುವ ದೊರೆಯೆ
ಕಾಯೋ ಎನ್ನನು ಐಯ್ಯಪ್ಪ ಸ್ವಾಮಿಯೇ ।।
No comments :
Post a Comment