Pages

Tuesday, October 15, 2024

Vandisuvadadiyali Gananathana

 ರಾಗ : ನಾಟ 

ತಾಳ :ಖಂದ  ಛಾಪು 

ರಚನೆ : ಪುರಂದರ ದಾಸರು. 



।।ಪಲ್ಲವಿ।।

ವಂದಿಸುವದಾದಿಯಲಿ  ಗಣನಾಥನ ।।


।।ಅನುಪಲ್ಲವಿ।।

ಸಂದೇಹ ಸಲ್ಲ ಶ್ರೀ ಹರಿಯಾಜ್ಞೆ  ಇದಕುಂಟು ।।


।।ಚರಣ ೧ ।।

ಹಿಂದೆ  ರಾವಣ ತಾನು  ವಂದಿಸದೆ  ಗಜಮುಖನ ।

ನಿಂದು ತಪವನುಗೈದು  ವರ  ಪಡೆಯಲು ।।

ಒಂದು  ನಿಮಿಷದಿ ಬಂದು ವಿಘ್ನವನು  ಆಚರಿಸಿ ।

ತಂದ  ವರಗಳನೆಲ್ಲಾ  ಧರೆಗೆ ಇಳಿಸಿದನು ।।

                                                             ।।ಪಲ್ಲವಿ।।





।।ಚರಣ  ೨ ।।

ಇಂದು ಜಗವೆಲ್ಲಾ ಉಮೆನಂದನನ  ಪೂಜಿಸಲು ।

ಚಂದದಿಂದಲಿ ಸಕಲ ಸಿದ್ಧಿಗಳನಿಟ್ಟು ।।

ತಂದೆ ಸಿರಿಪುರಂದರ  ವಿಠಲನ  ಸೇವೆಯೊಳು।

ಬಂದ  ವಿಘ್ನವ  ಕಳೆದಾನಂದವನು  ಕೊಡುವ ।।

                                                                      ।।ಪಲ್ಲವಿ।।


No comments :

Post a Comment