Pages

Thursday, August 20, 2020

Swarna Gowri Dora( daarada ) Mahime

 

 ಶ್ರೀ ಸ್ವರ್ಣಗೌರಿ ವ್ರತದಲ್ಲಿ ಹದಿನಾರು ಎಳೆ/ಗ್ರಂಥಿ   ಹಾಗೂ  ಹದಿನಾರು ಗಂಟುಗಳಿಂದ ಕೂಡಿದ ದಾರವನ್ನು ಸ್ತ್ರೀಯರು ಧರಿಸುವ ಪ್ರತೀತಿ  ಇದೆ .ಏನು ಈ ಹದಿನಾರು ಗ್ರಂಥಿಗಳ  ವಿಶೇಷ ? ಅದನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ ನನ್ನದು .ಏನಾದರೂ ತಪ್ಪಿದ್ದಲ್ಲಿ ವಿಷಾದಿಸುತ್ತೇನೆ . 


       ಇಡೀ ಸೃಷ್ಟಿಯು ಪುರುಷ ಹಾಗೂ  ಪ್ರಕೃತಿ  ಸ್ವರೂಪವಾದುದು .ಶ್ರೀಸ್ವರ್ಣಗೌರಿಯೂ ಪ್ರಕೃತಿ ಮಾತೆ .ಈ ತಾಯಿಯ ಅನುಗ್ರಹದಿಂದಲೇ ಸಮಸ್ತ ಸೃಷ್ಟಿಯೂ  ವಿಸ್ತಾರವಾಗಿ ಬೆಳೆಯುವುದು . 


                        ಹೀಗೆ ಸೃಷ್ಟಿ ವಿಸ್ತಾರವಾಗುವ ಕೊನೆ ಕೊನೆಯ ಹಂತಗಳಾದ ಸೂಕ್ಶ್ಮ ರೂಪವಾದ ಪಂಚತನ್ಮಾತ್ರೆಗಳು ( ಶಬ್ದ ,ಸ್ಪರ್ಶ ,ರೂಪ,ರಸ,ಗಂಧ )ಇವುಗಳು ವ್ಯಕ್ತವಾಗುವ ಪೃಥ್ವಿ, ಜಲ, ಅಗ್ನಿ,ವಾಯು,ಆಕಾಶಗಳೆಂಬ ಪಂಚಭೂತಗಳು ಹಾಗು ಪಂಚ ಕರ್ಮೇಂದ್ರಿಯಗಳು ಇವಿಷ್ಟೂ  ಸೇರಿ ೧೫ ತತ್ವಗಳು ಹಾಗೂ ಮನಸ್ಸು ಸೇರಿ ೧೬ ತತ್ವಗಳಿಗೂ ಶ್ರೀ ಗೌರಿಯೇ ಅಧಿಷ್ಠಾತ್ರಿ . 

                   

                      ದಾರದಲ್ಲಿರುವ ೧೬ ಎಳೆಗಳು ನಮ್ಮನ್ನು ಪಮಾತ್ಮಾ ತತ್ವದತ್ತ ಕರೆದೊಯ್ಯುವ ನಾಡಿಮಾರ್ಗಗಳ ಪ್ರತೀಕ .  ಹದಿನಾರು ಗಂಟುಗಳು ಮೇಲೆ ಹೇಳಲ್ಪಟ್ಟಿರುವ ತತ್ತ್ವಗಳ ಪ್ರತೀಕವಾದವು. ಪ್ರಕೃತಿ ಮಾತೆಯಾದ ಸ್ವರ್ಣಗೌರಿಯು ಮೂಲದಲ್ಲಿ ಬಂಗಾರ ವರ್ಣದಲ್ಲಿ ಇರುವುದರಿಂದ ಆ ತಾಯಿಯ ಸಂಪೂರ್ಣ ಅನುಗ್ರಹ ಪಡೆಯಲು ೧೬ ಗ್ರಂಥಿಗಳಿಗೆ ಅರಶಿನವನ್ನು ಲೇಪನ ಮಾಡಿ ಧರಿಸುವ  ಪ್ರತೀತಿ ಇದೆ. 

                    ಮಾನವನ ಜೀವನದ ಪರಗುರಿಯಾದ ಮೋಕ್ಶ ಸುಖವನ್ನು  ಕರುಣಿಸುವಲ್ಲಿ ದೇವಿಯು ಜಡಜೀವಿಗಳಾದ ನಮ್ಮನ್ನು ಶುದ್ಧ ಚೈತನ್ಯಮಯನಾದ ಪರಮಾತ್ಮನಿಗೂ ನಡುವೆ ಸಂಪರ್ಕವನ್ನು ಅನುಗ್ರಹಿಸುವ ಸೇತುವೆಯಂತಿರುವಳು . ಜಗನ್ಮಂಗಳೆಯಾದ  ಶ್ರೀ ಸ್ವರ್ಣಗೌರಿಯೂ ಸರ್ವರಿಗೂ   ಸಕಲ ಇಷ್ಟ ಸಿದ್ಧಾರ್ಥಗಳನ್ನು  ಅನುಗ್ರಹಿಸಿ ಮಂಗಳವನ್ನುಂಟು  ಮಾಡಲಿ ಎಂದು ಪ್ರಾರ್ಥಿಸೋಣ . 

No comments :

Post a Comment