Pages

Tuesday, July 18, 2017

Lakshmikantha Baro




ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ ಬಾರೋ
ಪಕ್ಷಿವಾಹನ ಏರಿದವನೇ  ಪಾವನಮೂರ್ತಿ ಬಾರೋ ||ಪ||
ಆದಿಮೂಲ ವಿಗ್ರಹ ವಿನೋದಿ ನೀನೇ  ಬಾರೋ
ಸಾಧುಸಜ್ಜನ ಸತ್ಯಯೋಗಿ ದಾನಿ ನೀನೇ  ಬಾರೋ ||
ಗಾಡಿಗಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋ
ರೂಢ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ ...(೨) ||  ||ಪ||
ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆ ಬಾರೋ
ಪನ್ನಗಶಯನ ಪುರಂದರವಿಠಲ ಬಾರೋ ||  ||ಪ||



6 comments :

  1. ನಮಸ್ಕಾರ ಅಪರ್ಣ ಅವರೇ,
    ಮೊದಲಿಗೆ, ನಿಮ್ಮ ಬ್ಲಾಗ್ ಮೂಲಕ ನಮ್ಮ ಪರಂಪರೆಯ ಜ್ಞಾನ ಹಂಚುತ್ತಿರುವದಕ್ಕೆ ನನ್ನ ಅಭಿನಂದನೆ.
    ಒಂದು ಪ್ರಶ್ನೆ, ಈ ಹಾಡಿನಲಿ 2ನೆ ಚರಣದಲಿ ಬರುವ "ಗಾಡಿಗಾರ " ಎಂಬ ಶಬ್ದದ ಅರ್ಥ ತಿಳಿಲಿಲ್ಲ. ಇದರ ಬಗ್ಗೆ ತಿಳಿದಿದ್ದರೆ ದಯವಿಟ್ಟು ತಿಳಿ ಹೇಳಿ . ಧನ್ಯವಾದ

    ReplyDelete
  2. ನಮಸ್ಕಾರ ರಾಜೀ ಅವರೇ ,


    ಮೊದಲಿಗೆ ನಿಮಗೆ ಧನ್ಯವಾದಗಳು .ಹಾಗೆ ನೀವು ಕೇಳಿದ ಪ್ರಶ್ನೆ "ಗಾಡಿಗಾರ " ಎಂಬ ಪದದ ಅರ್ಥ ಇಲ್ಲಿ ಕೃಷ್ಣಅರ್ಜುನನ ರಥದ ಸಾರಥಿಯಾಗಿದ್ದಕ್ಕೆ" ಗಾಡಿಗಾರ " ಎಂದು ಉಲ್ಲೇಖಿಸಿದ್ದಾರೆ .

    ReplyDelete
  3. Ee haadena raga tala yavadu tilisi please.

    ReplyDelete
  4. Ee haadena raga tala yavadu antha tilisi please.

    ReplyDelete
  5. Roopa m s
    ಈ ಹಾಡು ಯವ ರಾಗ ತಾಳ.

    ReplyDelete