Pages

Friday, November 11, 2016

Uththana Dwadashi Or Tulasi Habba

ಉತ್ಥಾನ ದ್ವಾದಶಿ  ಅಥವಾ ತುಲಸೀ /ತುಳಸೀ ಹಬ್ಬ  ಅಥವಾ ತುಳಸಿ ವಿವಾಹ 







ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಪವಿತ್ರದಿನವನ್ನು ತುಲಸೀ ವಿವಾಹವನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದವಿದ್ದರೆ ಇನ್ನೂ ಶ್ರೇಷ್ಠ.



ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿ ವ್ರತವೆಂದೂ ಕರೆಯುವರು. ಕಾರ್ತೀಕ ಶುದ್ಧ ಏಕಾದಶಿಯಂದು ಪ್ರಾತಃಕಾಲದಲ್ಲಿ ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಅಂದು ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ತುಂಬಾ ಶ್ರೇಷ್ಠ. ಅಂದಿನ ರಾತ್ರಿಯಂದೇ ವಿಷ್ಣುವನ್ನು ಎಬ್ಬಿಸಬೇಕು. ಹಾಗೆ ಎಬ್ಬಿಸುವಾಗ ಈ ಕೆಳಕಂಡ ವೇದೋಕ್ತ ಮಂತ್ರವನ್ನು ಹೇಳಬೇಕು. 

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್‌।
 ಸಮೂಢಮಸ್ಯ ಪಾಗ್‌ಂಸುರೇ।।

ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಮಳೆಯು ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸನ್ಯಾಸಿಗಳು ದೇಶ ಸಂಚಾರವನ್ನು ಮಾಡದೇ ಒಂದೆಡೆಯಲ್ಲಿ, ಚಾತುರ್ಮಾಸ್ಯ ವ್ರತವನ್ನು ಆಚರಿಸುವರು. ಆ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ನಿದ್ರಾವಸ್ಥೆಯಲ್ಲಿರುತ್ತಾನೆಂದೂ, ಚಾತುರ್ಮಾಸ್ಯ ಮುಗಿಯುವ ವೇಳೆಯಲ್ಲಿ ಅವನನ್ನು ಎಬ್ಬಿಸಲು ಸುಪ್ರಭಾತವನ್ನು ಹಾಡುವರು. ಅದು ಸಂಕ್ಷಿಪ್ತವಾಗಿ ಹೀಗಿದೆ. 

ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ। 
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂಕುರು।।

ಅಂದು ಧಾತ್ರೀ ದೇವಿಯ ಸ್ವರೂಪವಾದ ನೆಲ್ಲಿಯ ಮರವನ್ನು ಪೂಜಿಸಿ, ಧಾತ್ರೀ, ಶಾಂತಿ, ಮೇಧಾ, ಪ್ರಕೃತಿ, ವಿಷ್ಣುಪತ್ನೀ, ಮಹಾಲಕ್ಷ್ಮೀ, ರಮ್ಯಾ, ಕಮಲಾ, ಇಂದಿರಾ, ಲೋಕಮಾತಾ, ಕಲ್ಯಾಣೀ, ಕಮನೀಯಾ, ಸಾವಿತ್ರೀ, ಜಗದ್ಧಾತ್ರೀ, ಗಾಯತ್ರೀ, ಸುಧೃತೀ, ಅವ್ಯಕ್ತಾ, ವಿಶ್ವರೂಪಾ, ಸುರೂಪಾ ಮತು ಅಬ್ಧಿಭವಾ ಎಂಬ ಹೆಸರುಗಳಿಂದ ಅರ್ಚಿಸಬೇಕು. ಕೆಲವು ಮನೆಗಳಲ್ಲಿ ತುಲಸೀ ಮತ್ತು ಶ್ರೀಮನ್ನಾರಾಯಣನಿಗೆ ವಿವಾಹವನ್ನು ಮಾಡುವ ಪದ್ಧತಿಯೂ ಇದೆ.

 ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ತುಲಸೀ ದೇವಿಗೆ ಶ್ರೀಸೂಕ್ತದಿಂದಲೂ ಅರ್ಚನೆ ಮಾಡಬೇಕು. ತುಲಸೀಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುತ್ತಾರೆ. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಅದರ ಹಾರವನ್ನು ತುಲಸೀ ಮತ್ತು ನಾರಾಯಣನಿಗೆ ಹಾಕುವುದು ಪದ್ಧತಿ. ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಲಸೀ ವಿವಾಹವನ್ನು ಮಾಡುವರು.
ಸಂಕ್ಷಿಪ್ತವಾಗಿ ಪೂಜೆಯನ್ನು ಮಾಡುವ ವಿಧಿ ವಿಧಾನ ಇಲ್ಲಿದೆ :

ಧ್ಯಾನ :
ಚತುರ್ಬಾಹುಯುತಾಂ  ದೇವೀಮ್  ಶಂಖ ಪುಸ್ತಕಧಾರಿಣೀಮ್
ಪದ್ಮಾಕ್ಷಮಾಲಾಂ  ಪುಷ್ಪಾಮ್  ಚ ಧಾರಿಣೀಮ್  ಪುಣ್ಯದಾಯಿನೀಂ ।


ಧ್ಯಾಯೇಚ್ಚ  ತುಲಸೀಮ್  ದೇವೀಮ್  ಶ್ಯಾಮಾಂ
ಕಮಲಲೋಚನಾಮ್  ಪ್ರಸನ್ನಾಮ್  ಪದ್ಮಕಲ್ಹಾರ  ವರದಾಭಯ                                                      ಚತುರ್ಭುಜಾಮ್ ।
ಕಿರೀಟಹಾರ  ಕೇಯೂರ  ಕುಂಕುಮಾದಿ ವಿಭೂಷಿತಾಂ
ಧವಳಾಂಕುಶ  ಸಂಯುಕ್ತಾಮ್  ಪದ್ಮಾಸನ ನಿಷೇದುಶೀಮ್ ।


ವೃಂದಾಯೈ  ನಮಃ  ಆವಾಹನಂ ಸಮರ್ಪಯಾಮಿ।
ವೃಂದಾವನೈ  ನಮಃ  ಆಸನಂ  ಸಮರ್ಪಯಾಮಿ ।
ವಿಶ್ವಪೂಜಿತಾಯೈ  ನಮಃ ಪಾದ್ಯಮ್  ಸಮರ್ಪಯಾಮಿ।
ವಿಶ್ವಪಾವನ್ಯೇಯ್  ನಮಃ ಅರ್ಘ್ಯಮ್ ಸಮರ್ಪಯಾಮಿ ।
ಪುಷ್ಪಸಾರಾಯೈ  ನಮಃ  ಆಚಮನೀಯಂ ಸಮರ್ಪಯಾಮಿ ।
ಆನಂದಿನ್ಯೈ  ನಮಃ  ಸ್ನಾನಂ  ಸಮರ್ಪಯಾಮಿ ।
ತುಲಸ್ಯೈ  ನಮಃ  ಗಂಧಂ ಸಮರ್ಪಯಾಮಿ ।
ಕೃಷ್ಣಜೀವನ್ಯೈ  ನಮಃ  ವಸ್ತ್ರಂ ಸಮರ್ಪಯಾಮಿ ।


ಹರಿದ್ರಾಮ್  ಸಮರ್ಪಯಾಮಿ

ಸೌಭಾಗ್ಯ  ಶುಭದೇ  ದೇವಿ ಸರ್ವಮಂಗಳದಾಯಿನೀ
ಹರಿದ್ರಾಮ್  ತೇ ಪ್ರದಸ್ಯಾಮಿ  ಗೃಹಾಣ  ವರದಾಭವ ।

ಕುಂಕುಮಂ  ಸಮರ್ಪಯಾಮಿ

ಕುಂಕುಮಂ ಕಾಂತಿದಂ  ದಿವ್ಯ  ಸರ್ವಕಾರ್ಯ  ಫಲಪ್ರದಂ
ಕುಂಕುಮೇನಾರ್ಚಿತೇ  ದೇವಿ   ಗೃಹಾಣ ವರದಾಭವ ।


ಪರಿಮಳ ಪುಷ್ಪಮ್ ಸಮರ್ಪಯಾಮಿ 

ಜಾಜಿ ಪುನ್ನಾಗ  ಮಂದಾರಂ ಕೇತಕಿ ಚಂಪಕಾನಿಚ
ನಾನಾ ಸುಗಂಧಿಕಂ  ಪುಷ್ಪಮ್  ಅರ್ಪಯಾಮಿ  ಹರಿಪ್ರಿಯೇ ।


       ಇಂದು ತುಲಸೀ  ವಿವಾಹವಾದ ಕಾರಣ  ತುಲಸಿಯ ಕಟ್ಟೆಯನ್ನು  ಮದುಮಗಳಂತೆ  ಸಿಂಗರಿಸುತ್ತಾರೆ . ಧೂಪ ದೀಪ ಹಾಗೂ  ನೈವೇದ್ಯಗಳನ್ನು ಸಮರ್ಪಿಸಿ  ಆರತಿಯನ್ನು  ಬೆಳಗುತ್ತಾರೆ .

ತುಲಸೀ  ಆರತಿ ಹಾಡು 

ಎತ್ತಿದಳಾರತಿಯ  ಶ್ರೀ ತುಳಸಿಗೆ ಭಕ್ತಿಭಾವಗಳಿಂದಲಿ
ಎತ್ತಿದಳಾರತಿ  ಸತ್ಯಧರ್ಮನ ಸತಿ
ಅಚ್ಯುತನ  ತೋರೆಂದು ಅತಿ ದೈನ್ಯದಿಂದಲಿ ।। ಪ ।।


ಹಾರಾಕೇಯೂರದಿಂದ  ಚಿತ್ರಾವಳಿ ನಾರಿ ತುಳಸಿಗೆ ರಚಿಸಿ
ಚಾರುಹಸ್ತಗಳಿಂದ  ನಾರಿ ಬೊಗಸೆ ಒಡ್ಡಿ
ವಾರಿಜನಾಭನ ತೋರಿಸೆಂದೆನುತಲಿ ।।೧।।


ಅನ್ನ  ಬೇಡೋ ಋಷಿಗಳು ಯತಿಗಳು ಬಂದು ನನ್ನನ್ನು ಕಾಡುತಿಹರು
ಪನ್ನಂಗವೇಣಿಯೇ  ನಿನ್ನ ಮೊರೆಹೊಕ್ಕೇನೆ
ಪನ್ನಗಶಯನನ  ತೋರಿಸೆಂದೆನುತಲಿ ।।೨।।



ಅರ್ಘ್ಯ ಪ್ರಧಾನ :


ತುಲಸೀ  ಶ್ರೀಸಖೀ  ದೇವೀ  ಪಾಪಹಾರಿಣೀ ಪುಣ್ಯದೇ
ವಿಷ್ಣುನಾ ಸಹಿತಂ ದೇವೀ  ಗೃಹಾಣಾರ್ಘ್ಯಮ್  ನಮೋಸ್ತುತೇ
ಯನ್ಮಯಾ  ದುಷ್ಕೃತಂ ಸರ್ವಂ ಕೃತಂ ಜನ್ಮ ಶತೈರಪಿ
ಭಸ್ಮಿಭವತು ತತ್ಸರ್ವಂ ಅವೈಧವ್ಯಮ್  ಚ ದೇಹಿಮೇ ।

ಪ್ರಾರ್ಥನೆ :

ಯಥಾ ತೇ ನವಿಯೋಗೋಸ್ತೀ  ಭರ್ತ್ರಾ  ಸಹ ಸುರೇಶ್ವರೀ
ತಥಾ ಮಮ ಮಹಾಭಾಗೇ ಕುರುತ್ವಾಮ್  ಜನ್ಮ ಜನ್ಮನೀ ।


ಪ್ರಾರ್ಥನೆಯನ್ನು ಸಲ್ಲಿಸಿ ಸುಮಂಗಲಿಯರಿಗೆ  ತಾಂಬೂಲ ನೀಡಿ ಆಶೀರ್ವಾದ ಪಡೆಯಬೇಕು .







No comments :

Post a Comment