ನಮ್ಮಮ್ಮ ಲಕ್ಷ್ಮೀ ಬಾರಮ್ಮ ಶ್ರೀ ಗೊರವನಹಳ್ಳಿ
ಸೌಭಾಗ್ಯ ಲಕ್ಷ್ಮೀ ಬಾರಮ್ಮ ..... ।।ಪ।।
ಮಂಗಳಕಾರಿಣಿ ಭಾಗ್ಯವ ನೀಡು
ವರಶುಭಕಾರಿಣಿ ವರ ದಯಮಾಡು ..... (೨)
ಕುಂಕುಮ ಶೋಭಿತೆ ಕುಂಬಿನಿಪಾಲಿನಿ
ಕುಂಡಲದಾರಿಣಿ ಶ್ರೀದೇವಿ ಬಾಮ್ಮ ... ।।ನಮ್ಮಮ್ಮ।। ।।೧।।
ಕರುಣಾಲಯೇ ನೀ ಕಾಮಿತೆ ನೀಡು
ಪಾಮರ ಜನರ ಪಾಪವದೂಡು .... (೨)
ಅಮೃತವರ್ಷಿಣಿ ಸುಮಧುರ ಭಾಷಿಣಿ
ಶ್ರೀಕ್ಷೇತ್ರವಾಸಿನಿ ಶ್ರೀ ಲಕ್ಷ್ಮೀ ಬಾಮ್ಮ ... ।।ನಮ್ಮಮ್ಮ।। ।।೨।।
ಕಂದದಿ ಕರದಲಿ ಕಂಕಣ ಧರಿಸಿ
ಮಂಗಳರೂಪಿಣಿ ಸುಂದರಿ ಬಾಮ್ಮ .... (೨)
ಅಂಬುಜೆ ನಿನ್ನಯ ಚರಣಕೆ ನಮಿಸುವೆ
ವಂದಿಪೆ ಶ್ರೀಕರಿ ನಮ್ಮಮ್ಮ ಬಾಮ್ಮ ... ।।ನಮ್ಮಮ್ಮ।। ।।೩।।
ಚಂದದಿ ಕುಂದಣ ಪೀಠದಿ ಕುಳಿತ
ಇಂದಿರೆ ಶ್ಯಾಮಲೆ ವಂದಿತೆ ಬಾಮ್ಮ .... (೨)
ಸಂಪದವೀವ ಸಂಯಮಿ ನೀನು
ವಿಷ್ಣುವಲ್ಲಭೆ ಶ್ರೀಮಾತೆ ಬಾಮ್ಮ ..... ।।ನಮ್ಮಮ್ಮ।। ।।೪।।
ನಂದಾ ದೀಪವ ನಾ ಹಚ್ಚಿಟ್ಟು
ಕೃಪಾಪೂರಿತೆ ಕರೆಯುವೆನಮ್ಮ .... (೨)
ಪಾಪಹಾರಿಣಿ ಕಮಲೋದ್ಭವನಿ
ಪುಷ್ಪಪೂಜಿತೆ ನಲಿಯುತ ಬಾಮ್ಮ ... ।।ನಮ್ಮಮ್ಮ।। ।।೫।।
No comments :
Post a Comment