Pages

Monday, April 13, 2015

Enna manada donka

Sri+Vidyabhushana/Enna manadadonka song

                                 


ಎನ್ನ ಮನದ ಡೊಂಕ  ತಿದ್ದಿಸೋ ಶ್ರೀನಿವಾಸ 
ಎನ್ನ ಮನದ ಡೊಂಕ ತಿದ್ದಿಸಿ ,ನಿನ್ನ ಸೇವಕನಾದ ಮೇಲೆ 

ಇನ್ನು ಸಂಶಯವೇಕೆ  ಕೃಷ್ಣಾ ನಿನ್ನ ಚರಣದಲಿ ಸೇರಿಸೋ ।।ಎನ್ನ।।


ಉದಯವಾದರೆ ಊಟದ ಚಿಂತೆ ,ಅದರ ಮೇಲೆ ಭೋಗದ ಚಿಂತೆ 
ಹದಿನಾಲ್ಕು ಲೋಕವ ಆಳಬೇಕಂಬ  ಚಿಂತೆ 
ಇದು ಪುಣ್ಯ ಇದು ಪಾಪವೆಂದು  ಹೃದಯದಲ್ಲಿ ಭಯವು  ಇಲ್ಲದೆ 
ಮದಮೋಹಿತನಾದೆ  ನಿನ್ನ ಪದವ  ನಂಬದೆ  ದೀನದಯಾಳೋ ।।ಎನ್ನ।।


ನೆರೆ ಮನೆಯ  ಭಾಗ್ಯ ನೋಡಿ  ಸಹಿಸಲಾರದ ಅಸೂಯನಾಗಿ, 
ಹರಿಸ್ಮರಣೆದೆ   ವಿಮುಖನಾದೆ  ನರರ ಸ್ತುತಿಯ  ಮಾಡಿದೆ ,
ಪರರರ ಸತಿಗೆ ಪರರ ಅನ್ನಕ್ಕೆ  ತಿರುಗಿ ತಿರುಗಿ ಚಪಲನಾದೆ 
ಗುರು ಹಿರಿಯರ ದೂಷಿಸಿ  ಮರುಳನಾದೆ  ದೀನಶರಣ್ಯ ।।ಎನ್ನ।।


ಅಗಣಿತ ಸುಖ  ಬಂದರೆ ನಾ ದುಃಖ ಬಂದರೆ ಹರಿಯೆಂಬುವೆ ,
ಜಗದೊಳು  ಲಾಭವು ಬಂದರೆ  ಧನಿಕ ನಾನೆಂಬೇ 
ಮಿಗೆ  ಹಾರಿಗೆ ಹರಿಯ  ದೂಷಿಸಿ  ನಗೆದು ಪತಂಗ  ತಿಚ್ಚಿಲಿ ಬೀಳ್ವ 
ಬಗೆ ಆದೆನು ಪುರಂದರವಿಠಲ  ಖಗ ರಾಜಸುವಾಹನ ।।ಎನ್ನ।।

No comments :

Post a Comment