ದುರ್ಗಾಂಬಿಕೇ ತಾಯೇ ಜಗದಂಬಿಕೆ
ಸ್ವರ್ಗಾದಿಪನು ಸೇವಕ ನಿನಗೆ ।
ಶರಣರು ನಿನ್ನನು ನಂಬಿಹರಮ್ಮ
ಕರುಣೆಯ ತೋರೆ ಕಾಳಿ ಭವಾನಿ ।।ದುರ್ಗಾಂಬಿಕೇ।।
ಮುಂಡನ ಶಿರವನು ತರಿದವಳೆ
ಮುಂಡಕೂರಲಿ ನಿಂತವಳೇ
ಮುಂಡಕೂರ್ ದುರ್ಗೇ ಪೂಜಿಪೆನಮ್ಮ
ಚಂಡಿಕೆ ಈಶ್ವರಿ ಸಲಹಮ್ಮ ।।ದುರ್ಗಾಂಬಿಕೇ।।
ಭಾರ್ಗವ ರಾಮನು ಬಂದಿಹನು
ದುರ್ಗೇ ನಿನ್ನನು ನಿಲ್ಲಿಸಿದ
ದುರ್ಗತಿ ದೂರಕೆ ಸರಿಸಮ್ಮ
ಸದ್ಗತಿ ಕರುಣಿಸು ಶಾಂಭವಿ ।।ದುರ್ಗಾಂಬಿಕೇ।।
ಪಟ್ಟು ವಸ್ತ್ರಗಳ ಉಟ್ಟವಳೇ
ದುಷ್ಟರ ನಾಶನ ಗೈದವಳೇ
ಶಿಷ್ಟರ ಪಾಲಿಪ ಶಿವಸದನೇ
ಇಷ್ಟಾರ್ಥ ನೀಡುವ ಈಶ್ವರಿಯೇ ।।ದುರ್ಗಾಂಬಿಕೇ।।
Audio Link:
Bhakthi-Ganamrutha-Vol.-1/Durgambike/HVkxRiAGZ3c
No comments :
Post a Comment