Pages

Wednesday, October 29, 2014

Maralu Maadi

ರಚನೆ : ಪುರಂದರ ದಾಸರು


ಮರಳು ಮಾಡಿಕೊಂಡೇಯಲ್ಲೇ  ಮಾಯಾದೇವಿಯೇ ।ಪ।
ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ ।।ಅ . ಪ।।
ಜ್ಞಾನಿಗಳು ನಿತ್ಯ  ಅನ್ನ ಪಾನಾದಿಗಳನ್ನು  ಬಿಟ್ಟು
ನಾನಾ ವಿಧ ತಪದಲ್ಲಿದ್ದರು ಧ್ಯಾನಕ್ಕೆ ಸಿಲುಕದವನ ।।೧।।

ರಂಗನು ಭೂಲೋಕದಿ ಭುಜಂಗ ಗಿರಿಯೊಳಲ
ಮೇಲು ಮಂಗಪತಿಯಾಗಿ ನಿನ್ನ ಅಂಗೀಕರಿಸುವಂತೆ ।।೨।।

ಪ್ರಳಯ ಕಾಲದಲ್ಲಿ ಆಲದೆಲೆಯ  ಮೇಲೆ ಮಲಗಿದ್ದಾಗ
ಹಲವು ಆಭರಣಗಳು ಜಲವು ಆಗಿ ಜಾಣತನದಿ ।।೩।।

ಸರ್ವ ಸಂಗ ಬಿಟ್ಟು ಸನ್ಯಾಸಿಯಾದ ಕಾಲಕ್ಕೂ
ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ ।।೪।।

ಎಡಕೆ ಭೂಮಿ ಬಲಕೆ ಶ್ರೀಯು  ಎದುರಿನಲ್ಲಿ ದುರ್ಗಾದೇವಿ
ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಪ್ಪಂತೆ ।।೫।।

ಮಕ್ಕಳ ಪಡೆದರೆ ನಿನ್ನ ಚೊಕ್ಕತನವು ಪೋಪುವೆಂದು
ಪೊಕ್ಕಳೊಳು  ಮಕ್ಕಳ ಪಡೆದು ಕಕ್ಕುಲಾದಿ  ಪಡುವಂತೆ ।।೬।।

ಎಂದೆಂದಿಗೂ ಮರೆಯೇ  ನಿನ್ನಾನಂದದಿ  ಜನರಿಗೆಲ್ಲಾ
ತಂದು ತೋರೆ  ಸ್ವಾಧೀನ ಪುರಂದರ ವಿಠಲ ರಾಯನ ।।೭।।



No comments :

Post a Comment