Pages

Tuesday, September 16, 2014

Guru Raghavendrara Charana

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಾಯಚ ।
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ।।


ಗುರು ರಾಘವೇಂದ್ರರ ಚರಣ ಕಮಲದ  ದರುಶನದ ಭಾಗ್ಯವು ಇದು ।
ರಘುಚರಣಗಳ ಗುರು ಕಮಲ ನಯನವು ಸ್ಪರ್ಶಿಸಿದ  ಸಮಯವು ಇದು ।
ಗುರು ರಾಘವೇಂದ್ರ ಯೋಗೀಂದ್ರ ।।೧।।


ಗುರು ಕರುಣೆ ಮಂತ್ರಾಲಯದಲಿ ತುಂಗೆಯಂತೆ ಹರಿಯಲಿ ।
ಕಾಮಕ್ರೋಧಬೇಧಗಳ  ಅಳಿಸಿ ಹೃದಯದಿ ಮೂಲ ರಾಮನು ನೆಲಸಿದ ।
ಗುರು ರಾಘವೇಂದ್ರ ಯೋಗೀಂದ್ರ ।।೨।।


ಹನುಮಂತನಾಗಿ ಶ್ರೀ ರಾಮನನ್ನು  ಅಂತರಂಗದಿ  ನೆಲಸುತ ।
ಅಷ್ಟಸಿದ್ಧಿಗಳನು  ಔದಾರ್ಯದಿಂದ  ಅಕ್ಷತೆಯಂತೆ  ನೀಡಿದ ।
ಗುರು ರಾಘವೇಂದ್ರ  ಯೋಗೀಂದ್ರ ।।೩।।



ತುಳಸಿಯ ವನದಲಿ ರಾಘವೇಂದ್ರರು  ವನಮಾಲಿಯ ಕಂಡರು ।
ತುಳಸಿಯ ತೀರ್ಥವ ತಂದ ಯತಿಗಳು  ಚೈತನ್ಯವ ತಂದರು ।
ಗುರು ರಾಘವೇಂದ್ರರ ಚರಣ ಕಮಲದ ದರುಶನದ ಭಾಗ್ಯವು ಇದು ।
ಗುರು ರಾಘವೇಂದ್ರ ಯೋಗೀಂದ್ರ ----(೨)



No comments :

Post a Comment