ರಚನೆ : ಪುರಂದರ ದಾಸರು
ರಾಗ : ಸಿಂಧು ಭೈರವಿ
ತಾಳ : ಆದಿ
ವೆಂಕಟಾಚಲ ನಿಲಯಂ ವೈಕುಂಠಪುರ ವಾಸಂ
ಪಂಕಜ ನೇತ್ರಂ ಪರಮ ಪವಿತ್ರಂ
ಶಂಖ ಚಕ್ರಧರ ಚಿನ್ಮಯ ರೂಪಂ ।।ಪ।।
।।ವೆಂಕಟಾಚಲ ।।
ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಂ
ತುಂಬುರು ನಾರದ ಗಾನವಿಲೋಲಂ ।।ಅ. ಪ।।
।।ವೆಂಕಟಾಚಲ।।
ಮಕರ ಕುಂಡಲಧರ ಮದನಗೋಪಾಲಂ
ಭಕ್ತ ಪೋಷಕ ಶ್ರೀ ಪುರಂದರವಿಠಲಮ್ ।।ಚರಣ।।
।।ವೆಂಕಟಾಚಲ।।
No comments :
Post a Comment