ಮಾಲಕಮಂಡಲು ಧರಃ ಕರಪದ್ಮಯುಗ್ಮೆ
ಮಧ್ಯಸ್ಥಪಾಣಿಯುಗಲೇ ಡಮರುತ್ರಿಶೂಲೇ ।
ಯಸ್ಯಸ್ತ ಊರ್ಧ್ವಕರಯೋಃ ಶುಭಶಂಖಚಕ್ರೆ
ವಂದೇ ತಮತ್ರಿವರದಂ ಭುಜಷಟ್ಕಯುಕ್ತಂ ।।
ಅರ್ಥ - ಕೆಳಗಿನವೆರಡು ಕೈಗಳೆಂಬ ಕಮಲಗಳಲ್ಲಿ ರುದ್ರಾಕ್ಷ ಮಾಲೆ , ಕಮಂಡಲಗಳೂ ನಡುವಿನವೆರಡು ಕೈಗಳಲ್ಲಿ ಡಮರು ತ್ರಿಶೂಲಗಳೂ ಮತ್ತು ಯಾವಾತನ ಮೇಲಿನವೆರಡು ಕೈಗಳಲ್ಲಿ ಶುಭಪ್ರದವಾದ ಶಂಖ - ಚಕ್ರಗಳೂ ಉಂಟೋ ಅಂತಹ ಆರು ಭುಜಗಳುಳ್ಳ ಅತ್ರಿಋಷಿಗೆ ವರಪ್ರದನಾದವ (ದತ್ತ ) ನನ್ನು ವಂದಿಸುವೆ .
ಪರಮಭಾಗವತರಾದ ನಾರದ ಮಹರ್ಷಿಗಳು ಬ್ರಹ್ಮನ ಮಾನಸ ಪುತ್ರರು . ಯಾವಾಗಲೂ ಭಗವಂತನ ಪರಮ ಪವಿತ್ರವಾದ ನಾಮವನ್ನುಚ್ಚರಿಸುವಂತಹ ಪುಣ್ಯ ಪುರುಷರು . ಆದರೆ ಅವರು " ಕಲಹಪ್ರಿಯೋನಾರದಃ " ಕಲಹಪ್ರಿಯರು ಎಂಬ ಹೆಸರನ್ನು ಪಡೆದರು . ಈ ಹೆಸರು ಅವರಿಗೆ ನಿಂದಾವ್ಯಂಜಕವಾಗಿರಲಿಲ್ಲ . ಯಾಕೆಂದರೆ ಅವರಿಂದ ಉಂಟಾಗುವ ಕಲಹಗಳು ಮೋಜಿಗಾಗಿರದೆ , ಪರಿಣಾಮದಲ್ಲಿ ಎರಡೂ ಪಕ್ಷಗಳಿಗೆ ಕಲ್ಯಾಣಕರವೂ ಜಗತ್ತಿಗೆ ಹಿತಪ್ರದವೂ ಆಗಿರುತ್ತಿದ್ದವು . ಆದ್ದರಿಂದ ಈ ಹೆಸರು ಒಂದು ಬಗೆಯಿಂದ ವಂದ್ಯವೇ ಆಗಿತ್ತು . ಜಗತ್ತಿನ ಕಲ್ಯಾಣಕ್ಕಾಗಿ ಅವತರಿಸಿದ ಸಂತರಿಂದ - ಮಹಂತರಿಂದ ಒದಗುವ ಕರ್ಮವು ಹೇಯವೆಂತಾದೀತು ? 'ಪರಿಣಾಮೆ ಅಮೃತೋಪಮಂ ' ಎಂಬಂತೆ ಕೊನೆಗೆ ಹಿತಪ್ರದವಾದ ಕರ್ಮವು ಸತ್ಕರ್ಮವೆನಿಸುವುದಷ್ಟೇ !
ನಾರದರು ತ್ರಿಲೋಕ ಸಂಚಾರಿಗಳು . ವಾಡಿಕೆಯಂತೆ ಭೂಲೋಕವನ್ನು ನೋಡಿಕೊಂಡು ದೇವಲೋಕಕ್ಕೆ ಹೋದರು . ಅಲ್ಲಿ ಬ್ರಹ್ಮ , ವಿಷ್ಣು , ಮಹೇಶ್ವರರ ಪತ್ನಿಯರಾದ ಸರಸ್ವತಿ ,ಲಕ್ಷ್ಮಿ , ಪಾರ್ವತಿಯರಿಗೆ ತಾವೇ ಅತ್ಯುಚ್ಚ ಪತಿವ್ರತೆಯರೆಂಬ ಅಹಂಕಾರವುಂಟಾಗಿತ್ತು . ಭೂಲೋಕದಲ್ಲಿ ಅತ್ರಿಮಹರ್ಷಿಯು ಹೆಂಡತಿ ಅನಸೂಯೆಯು ದೊಡ್ಡ ಪತಿವ್ರತೆಯಾಗಿದ್ದಳು . ಸರಸ್ವತಿ ಮೊದಲಾದವರ ಅಹಂಕಾರವನ್ನು ನಾಶಪಡಿಸ ಬೇಕೆಂದೂ ಅನಸೂಯೆಯ ಪಾತಿವ್ರತ್ಯದ ಮಹಿಮೆಯನ್ನು ಬೆಳಗಬೇಕೆಂದೂ ಮತ್ತು ಸದ್ಯಕ್ಕೆ ದತ್ತನೆಂದು ಪೂಜಿಸಲ್ಪಡುವ ತ್ರಿಮೂರ್ತಿಗೆ ಜಗತ್ತಿನ ಕಲ್ಯಾಣಕ್ಕಾಗಿ ಅವತರಿಸಲು ಸಮಯವುಂಟಾಗಲೆಂದೂ ನಾರದರು ಕಲಹದ ಬೀಜವನ್ನು ಬಿತ್ತಿದರು . 'ಅನಸೂಯೆಯ ಪತಿವ್ರತಾ ಧರ್ಮದ ಮುಂದೆ , ನಿಮ್ಮದು ಸೂರ್ಯನ ಮುಂದೆ ಹೊನ್ನಿ ಹುಳುವು ಬೆಳಗಿದಂತೆ ' ಎಂದು ಸರಸ್ವತಿ ಮೊದಲಾದವರಲ್ಲಿ ಮತ್ಸರವುಂಟಾಗುವಂತೆ ಹೇಳಿದರು . ಅದರಿಂದಾಗಿ ಅವರು ಅನಸೂಯೆಯ ಸತ್ವಭಂಗ ಮಾಡಲು , ತಂತಮ್ಮ ಪತಿಗಳನ್ನು ಆಗ್ರಹಪಡಿಸಿದರು .
ಬ್ರಹ್ಮ , ವಿಷ್ಣು , ಮಹೇಶರು ಅದಕ್ಕಾಗಿ ವೃದ್ಧ ಬ್ರಾಹ್ಮಣ ವೇಷವನ್ನು ಧರಿಸಿದರು . ಪತಿಧರ್ಮಪರಾಯಣಳಾದ
ಅತ್ರಿಮಹರ್ಷಿಯ ಹೆಂಡತಿ ಅನಸೂಯೆಯು ಆಶ್ರಮದಲ್ಲಿ ಒಬ್ಬಳೇ ಇರುವ ಸಮಯವನ್ನು ಸಾಧಿಸಿ ,ಅಲ್ಲಿಗೆ ಬಂದರು ಮತ್ತು
ವಸ್ತ್ರಹೀನಳಾಗಿ ತಮಗೆ ಉಣಬಡಿಸಬೇಕೆಂದು ಕೇಳಿದರು . ಹಾಗೆ ಮಾಡದಿದ್ದರೆ ಹಾಗೆ ಮರಳಿ ಹೋಗುವುದಾಗಿಯೂ ಹೇಳಿದರು . ಈ ಮಾತು ಕೇಳಿ ಅನಸೂಯೆಯು ಜಗದ್ಜನನಿಯನ್ನು ಪ್ರಾರ್ಥಿಸಿ ಹಾಗು ಪತಿಯನ್ನು ನೆನೆದು ಊಟದ ಪದಾರ್ಥಗಳನ್ನು ತೆಗೆದುಕೊಂಡು ಬಡಿಸಲು ಹೊರಗೆ ಬಂದಾಗ ತ್ರಿಮೂರ್ತಿಗಳು ಬಾಲರೂಪವನ್ನು ಹೊಂದಿ
ಅಳತೊಡಗಿದರು .ಬಾಲ ರೂಪದ ಶಿಶುಗಳಿಗೆ ತಾಯಿಯಂತೆ ಉಣಬಡಿಸಿದಳು . ಹೀಗೆ ತ್ರಿಮೂರ್ತಿಗಳಿಗೆ ತಾಯಿಯಾದಳು ಅನಸೂಯೆ .
ಅನಸೂಯೆಯ ಪಾತಿವ್ರತ್ಯ ಪ್ರಭಾವದಿಂದ ಸಂತುಷ್ಟರಾಗಿ , ತಮ್ಮ ನಿಜಸ್ವರೂಪದಲ್ಲಿ ಪ್ರಕಟರಾದರು. ಅವರು ಆ ಮೂರು ಕೂಸುಗಳನ್ನು ಸಂತೋಷದಿಂದ ಅವಳಿಗೆ ಅರ್ಪಿಸಿದರು . ಆ ಕೂಸುಗಳಿಗೆ ಅನುಕ್ರಮವಾಗಿ ಸೋಮ , ದತ್ತ ಮತ್ತು ದುರ್ವಾಸ ಎಂದು ಹೆಸರಿಸಲಾಯಿತು . ಈ ಬಾಲಕರು ದೊಡ್ಡವರಾದ ಮೇಲೆ ದುರ್ವಾಸನು ತಪಾಚರಣೆಗಾಗಿ ಹೊರಟು ಹೋದನು . ಸೋಮನು ತನ್ನ ಚಂದ್ರಮಂಡಲವನ್ನು ಸೇರಿದನು . ಆದರೆ ಮಹಾತ್ಮ ದತ್ತನು ಮಾತ್ರ ತಾಯಿ -ತಂದೆಯನ್ನು ಸುಖಪಡಿಸುತ್ತ ಆಶ್ರಮದಲ್ಲಿ ಉಳಿದನು . ಅತ್ರಿಪುತ್ರನಾದ್ದರಿಂದ ಆತ್ರೇಯನು ,ಅತ್ರಿಗೆ ದೇವತೆಗಳಿಂದ ಕೊಡಲ್ಪಟ್ಟ ಮೂಲಕ ದತ್ತನು . ಅದಕ್ಕಾಗಿ ದತ್ತಾತ್ರೇಯನೆಂಬ ಅಭಿದಾನವುಂಟಾಯಿತು .
ದತ್ತನು ನಡೆದ ಮನ್ವಂತರದ ಆರಂಭದಲ್ಲಿ ಮೊದಲನೆಯ ಪರ್ಯಯದೊಳಗಿನ ತ್ರೇತಾಯುಗದಲ್ಲಿ ಜನಿಸಿದನು . ಇವನು ಪರಮ ಬ್ರಹ್ಮ ನಿಷ್ಟನಾಗಿದ್ದನು . ಅಲರ್ಕ , ಪ್ರಹ್ಲಾದ , ಯದು ಮತ್ತು ಸಹಸ್ರಾರ್ಜುನರು ಈತನ ಶಿಷ್ಯರಾಗಿ ಬ್ರಹ್ಮವಿದ್ಯೆಯನ್ನು ಪಡೆದರು . ಸೃಷ್ಟಿ ಕ್ರಮದಂತೆ ಒಂಬತ್ತು ತಿಂಗಳು ಗರ್ಭವಾಸವನ್ನು ಭೋಗಿಸಿ , ಮಾರ್ಗಶೀರ್ಷ ಮಾಸದ ಪೌರ್ಣಿಮೆ (ಹುಣ್ಣಿಮೆ )ಗೆ ಅನಸೂಯೆಯ ಉದರದಿಂದ ದತ್ತನು ಜನಸಿದಂತೆ ಸ್ಕಂದ ಪುರಾಣದಲ್ಲಿ ಉಲ್ಲೇಖವುಂಟು . ಅಥರ್ವಣವೇದೋಪನಿಷತ್ತಿಗೆ ದತ್ತಾತ್ರೇಯ ಎಂದು ಹೆಸರಿದೆ .
ದತ್ತನ ಸ್ವರೂಪ -
ತ್ರಿಮೂರ್ತಿದರ್ಶಕವಾಗಿ ಮೂರು ಮೋರೆ , ಆರು ಕೈಗಳು , ಎರಡು ಕಾಲುಗಳು ಉಂಟು . ಚತುರ್ವೇದ ದರ್ಶಕ ನಾಲ್ಕು ನಾಯಿಗಳು ಮತ್ತು ಸಮೀಪದಲ್ಲಿಯೇ ಒಂದು ಕಾಮಧೇನು ಈ ಬಗೆಯಾಗಿದೆ .
ಕಲಿಯುಗದಲ್ಲಿ ತಾತ್ಕಾಲಿಕ ಫಲವನ್ನು ಕೊಡುವ ದೈವತ್ವವು ದತ್ತನ ಹೊರತು ಬೇರೊಂದಿಲ್ಲ ; ಜಾಗೃತಿ ಇಲ್ಲವೇ ಸ್ವಪ್ನ ಸೃಷ್ಟಿಯಲ್ಲಿ ಸಾಕ್ಷಾತ್ಕಾರವನ್ನು ತೋರುವ ದೈವತ್ವವು ಇದೇ ! ಗುರು ಚರಿತ್ರೆಯಲ್ಲಿ ಬಣ್ಣಿಸಲಾದ ಕಥೆಗಳಿಂದ ಈ ಮಾತು ಸತ್ಯವೆಂದೆನಿಸುವುದು .
ಕಾಷಾಯ ವಸ್ತ್ರಮ್ ಕರದಂಡ ಧಾರಿಣಂ ಕಮಂಡಲುಂ ಪದ್ಮ ಕರೇಣ ಶಂಖಂ ।
ಚಕ್ರಂ ಗಧಾಭೂಷಿತ ಭೂಷಣಾಢಯ್ಮ್ ಶ್ರೀಪಾದ ರಾಜಂ ಶರಣಂ ಪ್ರಪದ್ಯೇ। ।೧।।
ಔದುಂಬರಃ ಕಲ್ಪವೃಕ್ಷಃ ಸಂಗಮಃ ಕಾಮದೇವನವಃ ।
ಚಿಂತಾಮಣಿಗುರೋಹ್ ಪಾದಂ ದುರ್ಲಭಂ ಭುವನತ್ರಯೇ ।।೨।।
ಕೃತೇ ಜನಾರ್ದನೋ ದೇವಃ ತ್ರೇತಾಯಾಂ ರಘುನಂದನಃ ।
ದ್ವಾಪರೇ ರಾಮಕೃಷ್ನೌ ಚ ಕಲೌ ಶ್ರೀಪಾದ ವಲ್ಲಭಃ ।।೩।।
ಅರ್ಥ - ಕಾವಿ ಬಟ್ಟೆಯನುಟ್ಟುವ , ದಂಡ ಕಮಂಡಲು ಧರಿಸಿದವ , ಶಂಖ , ಚಕ್ರ ಮತ್ತು ಗದೆಗಳಿಂದ ಭೂಷಿತವಾದ ಕರಕಮಲಗಳಿಂದ ಭೂಷಣಗೊಂಡವ ಇಂತಹ ಶ್ರೀಪಾದರಾಜನಿಗೆ ಶರಣಾಗತನಾಗುವೆ . (೧) ದತ್ತನು ವಾಸಿಸುವ ಔದುಂಬರ ( ಅತ್ತಿ ಗಿಡ ) ಕಲ್ಪವೃಕ್ಷವು, ಸಂಗಮವೆ ಕಾಮಧೇನುವು ಮತ್ತು ಗುರುವಿನ ಪಾದವೇ ಚಿಂತಿಸಿದ್ದನ್ನು ಕೊಡುವ ಚಿಂತಾಮಣಿಯು . (ಈ ಯೋಗವು )ಮೂರು ಲೋಕಗಳಲ್ಲಿಯೂ ದುರ್ಲಭವು . (೨) ಕೃತಯುಗದಲ್ಲಿ ದೇವನು ಜನಾರ್ದನನು. ತ್ರೇತಾಯುಗದಲ್ಲಿ ರಘುನಂದನನು , ಅಂದರೆ ರಾಮಚಂದ್ರನು . ದ್ವಾಪರ ಯುಗದಲ್ಲಿ ಬಲರಾಮ ಶ್ರೀ ಕೃಷ್ಣರು ಮತ್ತು ಕಲಿಯುಗದಲ್ಲಿ ಶ್ರೀಪಾದ ವಲ್ಲಭ (ದತ್ತ )ನು .ಆಯಾ ಯುಗಗಳಲ್ಲಿ ಆಯಾ ದೇವತೆಗಳ ಭಕ್ತಿಯು ತೀವ್ರವೇ ಫಲಿಸುತಿತ್ತು, ಫಲಿಸುವುದು .

No comments :
Post a Comment