Pages

Wednesday, November 13, 2013

Sree Mahalakumi

ಶ್ರೀ ಮಹಾಲಕುಮಿ  ದೇವಿಯೇ  ಕೋಮಲಾಂಗಿಯೇ  ಸಾಮಗಾಯನ ಪ್ರೀಯಳೇ ।ಪ।
ಹೇಮಗರ್ಭ ಕಾಮಾರಿ  ಶಕ್ರಸ್ತುರ  ಸ್ತೋಮವಂದಿತಳೇ   ಸೋಮಸೋದರಿಯೇ ।।ಅ  ಪ ।।

ಬಟ್ಟಕುಂಕುಮ  ನೊಸಲೊಳೆ  ಮುತ್ತಿನ ಹೊಸ ಕಠ್ಠಾಣಿ  ತ್ರಿವಳಿ ಕೊರಳೋಲೆ
ಇಟ್ಟ  ಪೊನ್ನೋಲೆ  ಕಿವಿಯೋಲೆ  ಪವಳದ  ಕಯ್ಯ  ಕಟ್ಟು  ಕಂಕಣ  ಕೈ ಬಳೆ ।
ಕೊಟ್ಟ ಕುಬುಸ  ಬಿಗಿದುಟ್ಟ  ಪೀತಾಂಬರ  ಘಟ್ಟಿ  ವಡ್ಯಾಣ  ಕಾಲಂದುಗೆ  ರುಳಿಗೆಜ್ಜೆ
ಬೆಟ್ಟಲ್ಲಿ  ಪೊಳೆವುದು  ಮೇಂಟಕೆ  ಕುರುಪಿಲ್ಲಿ  ಇಟ್ಟು  ಶೋಭಿಸುವ ಅಷ್ಟ ಸಂಪನ್ನೇ ।।೧।।


ಸಕಲ  ಶುಭ ಗುಣ ಭರಿತಳೆ  ಏಕೋ ದೇವಿಯೇ ವಾಕು  ಲಾಲಿಸಿ ನೀ ಕೇಳೇ
ನೋಕನಿಯನ್ನ  ಮಹಲೀಲೆ  ಕೊಂಡಾಡುವಂತ  ಏಕ ಮಾನವ ಕೊಡು  ಶೀಲೆ ।
ಬೇಕುಬೇಕು  ನಿನ್ನ ಪತಿ ಪಾದಾಬ್ಜವ  ಏಕಾಂತದಿ ಪೂಜಿಪರ  ಸಂಘ ಕೊಡು
ಲೋಕದ ಜನರಿಗೆ ನಾ  ಕೈಯೊಡ್ಡದಂತೆ  ನೀ ಕರುಣಿಸು  ತಾಯೇ  ರಾಕೇಂದುವದನೇ ।।೨।।


ಮಂದರಧರನರಸಿಯೇ  ಇಂದಿರೆ ಎನ್ನ  ಕುಂದುದೋಷಗಳಳಿಯೇ
ಅಂದ ಸೌಭಾಗ್ಯದ ಸಿರಿಯೇ  ತಾಯೇ  ನಾ ನಿನ್ನ ಕಂದ  ಮುಂದಕ್ಕೆ ಕರೆಯೇ ।
ಸಿಂಧು ಶಯನ ಸಿರಿ  ವಿಜಯವಿಠಲರಾಯ  ಎಂದೆಂದಿಗೂ  ಮನದಿಂದಗಲದೆ
ಆನಂದದಿಂದಲಿ  ಬಂದು  ಮುಂದೆ ಕುಣಿಯುವಂತೆ ವಂದಿಸಿ ಪೇಳಮ್ಮ  ಸಿಂಧು ಸುತೆಯಳೆ ।।೩।।


No comments :

Post a Comment