ಯಾ ದೃಷ್ಟಾ ನಿಖಿಲಾಘಸಂಗಶಮನೀ ಸ್ಪೃಷ್ಟಾ ವಪುಪಾವನೀ ।
ರೋಗಾಣಾಮಭಿವಂದಿತಾ ನಿರಸನಿ ಸಿಕ್ತಾಂತಕತ್ರಾಸಿನಿ ।
ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ ।
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮಃ ।।
ಕಲ್ಯಾಣಂ ತುಳಸಿ ಕಲ್ಯಾಣಂ ।। ।।ಪ।।
ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ ।
ಬಲ್ಲಿದ ಶ್ರೀ ವಾಸುದೇವನಿಗೆ ।। ।।ಅ ಪ।।
ಅಂಗಳದೊಳಗೆಲ್ಲ ತುಳಸಿಯ ವನ ಮಾಡಿ
ಶೃಂಗಾರ ಮಾಡಿ ಶೀಘ್ರದಿಂದ ।।
ಕಂಗಳ ಪಾಪವ ಪರಿಹರಿಸುವ ।
ಮುದ್ದುರಂಗ ಬಂದಲ್ಲಿ ನೆಲೆಸಿಹನು ।।
ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು ।
ತಂದ ಶ್ರೀ ಗಂಧಾಕ್ಷತೆ ಪುಷ್ಪದಿಂದ ।।
ಸಿಂಧುಶಯನನ ವೃಂದಾವನದಿ ಪೂಜಿಸೆ ।
ಕುಂದದ ಭಾಗ್ಯವ ಕೊಡುತಿಹಳು ।।
ಉತ್ಥಾನ ದ್ವಾದಶಿ ದಿವಸದಿ ಕೃಷ್ಣಗೆ ।
ಉತ್ತಮ ತುಳಸಿಗೆ ವಿವಾಹವ ।।
ಚಿತ್ತನಿರ್ಮಲರಾಗಿ ಮಾಡಿದವರಿಗೆ ।
ಉತ್ತಮ ಗತಿ ಈವ ಪುರಂದರ ವಿಠಲ ।।
ಆಡಿಯೋ ಲಿಂಕ್ -
kalyanam-tulasi-kalyanam_song
ರೋಗಾಣಾಮಭಿವಂದಿತಾ ನಿರಸನಿ ಸಿಕ್ತಾಂತಕತ್ರಾಸಿನಿ ।
ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ ।
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮಃ ।।
ಕಲ್ಯಾಣಂ ತುಳಸಿ ಕಲ್ಯಾಣಂ ।। ।।ಪ।।
ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ ।
ಬಲ್ಲಿದ ಶ್ರೀ ವಾಸುದೇವನಿಗೆ ।। ।।ಅ ಪ।।
ಅಂಗಳದೊಳಗೆಲ್ಲ ತುಳಸಿಯ ವನ ಮಾಡಿ
ಶೃಂಗಾರ ಮಾಡಿ ಶೀಘ್ರದಿಂದ ।।
ಕಂಗಳ ಪಾಪವ ಪರಿಹರಿಸುವ ।
ಮುದ್ದುರಂಗ ಬಂದಲ್ಲಿ ನೆಲೆಸಿಹನು ।।
ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು ।
ತಂದ ಶ್ರೀ ಗಂಧಾಕ್ಷತೆ ಪುಷ್ಪದಿಂದ ।।
ಸಿಂಧುಶಯನನ ವೃಂದಾವನದಿ ಪೂಜಿಸೆ ।
ಕುಂದದ ಭಾಗ್ಯವ ಕೊಡುತಿಹಳು ।।
ಉತ್ಥಾನ ದ್ವಾದಶಿ ದಿವಸದಿ ಕೃಷ್ಣಗೆ ।
ಉತ್ತಮ ತುಳಸಿಗೆ ವಿವಾಹವ ।।
ಚಿತ್ತನಿರ್ಮಲರಾಗಿ ಮಾಡಿದವರಿಗೆ ।
ಉತ್ತಮ ಗತಿ ಈವ ಪುರಂದರ ವಿಠಲ ।।
ಆಡಿಯೋ ಲಿಂಕ್ -
kalyanam-tulasi-kalyanam_song
No comments :
Post a Comment