ರಾಗ : ಹಿಂದುಸ್ತಾನಿ ಕಾಪಿ
ರಚನೆ : ಪುರಂದರ ದಾಸರು
ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ ..... (೨) (ಅ. ಪ)
ತುಳಸಿಯ ವನದಲಿ ಹರಿ ಇಹನೆಂಬುದ ಶೃತಿಯ ಸಾರುತಿದೆ ಕೇಳಿ.....
ತುಳಸಿಯ ದರುಶನದಿಂದ ದುರಿತಗಳೆಲ್ಲವು ದೂರಾಗುವುದು ಕೇಳಿ...
ತುಳಸಿಯ ಸ್ಪರ್ಶ ಮಾಡಿ ಸಕಲ ಇಷ್ಟವ ಪಡೆದು ಸುಖದಲಿ ನೀವು ಬಾಳಿ .....
(ಬೃಂದಾವನವೇ )
ಮೂಲ ಮೃತ್ತಿಕೆಯನು ಮುಖದಲಿ ಧರಿಸಲು ಮೂರು ಲೋಕ ವಶವಾಹುದು
ಮಾಲೆ ಕೊರಳಲಿ ಇಟ್ಟ ಮನುಜಗೆ ಮುಕ್ತಿ ಮಾರ್ಗವ ತೋರುವುದು
ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮಿ ಶ್ರೀ ತುಳಸಿ
ಪುರಂದರ ವಿಠಲನ ಚರಣ ಕಮಲಾ ಸ್ಮರಣೆ ಕೊಡುವ ತುಳಸಿ ....
(ಬೃಂದಾವನವೇ )
No comments :
Post a Comment