ಎದ್ದು ಬರುತ್ತಾರೆ ನೋಡೇ ತಾ -
ವೆದ್ದು ಬರುತ್ತಾರೆ ನೋಡೇ ।।ಪ।।
ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ ।।ಅ.ಪ।।
ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು
ಚೆಲುವ ಮುಖದೊಳು ಪೊಳೆವ ದಂತಗಳಿಂದ ।।
ಹೃದಯಮಂದಿರದಲ್ಲಿ ಪದುಮನಾಭನ ಭಜಿಸಿ
ಮುದಮನದಲಿ ನಿತ್ಯ ಸದಮಲ ರೂಪತಾಳಿ ।।
ದಾತ ಗುರು ಜಗನ್ನಾಥವಿಠಲನ್ನ
ಪ್ರೀತಿಯ ಪಡಿಸುತ ದೂತರ ಪೊರೆಯುತ ।।
Audio Link :
eddu-baruthare-song
No comments :
Post a Comment