Pages

Thursday, May 16, 2013

Aanjaneyane Amaravandita Kanjanaabhana Dhootane



AanjanEyanE amaravamdita kamjanaAbhAna DhutanE ||PA||

SaMjiviniyanu tamdu kapigala namju kalEda prakyAtanE ||A PA||

KaamanigrahanEnisi surarabhimaAnya dEvatE eniside|
RamapaadakKeragi nadEdu nisseema ninEndaniside ||1||


sindhu haaride sheeghradindali bamdu seetegE  namisidE  |
tamdu mudrikeyittu maatEgE amdu santhoshabadisidE  ||2||


janakatanujeya manava harushisi vanava kittidaadidE |
dhanujarannu sadEdu lamkayananalagaahuti maadide  ||3||

sriramakaAryava vahisi akshakumarananu samhariside
gHora rakkasrEmbuvaranu maArivashavanu ghaiside  |4||

bHaradi bamdu sriramapaAdakKeragi binnaha maadide |
uragagiri hayavadanana paramabhakta nee nEndEnisidE ||5||


Kannada  Lyrics :

ಆಂಜನೇಯನೇ  ಅಮರವಂದಿತ   ಕಂಜನಾಭನ  ಧೂತನೇ ।।ಪ।।

ಸಂಜೀವಿನಿಯನು ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೇ ।।ಅ . ಪ।।

ಕಾಮಿನಿಗ್ರಹನೆನಿಸಿ  ಸುರರಭಿಮಾನ್ಯ ದೇವತೆ ಎನಿಸಿದೆ ।
ರಾಮಪಾದಕ್ಕೆರಗಿ  ನಡೆದು ನಿಸ್ಸೀಮ ನೀನೆಂದೆನಿಸಿದೆ ।।೧।।

ಸಿಂಧು ಹಾರಿದೆ ಶೀಘ್ರದಿಂದಲಿ ಬಂದು  ಸೀತಗೆ ನಮಿಸಿದೆ ।
ತಂದು ಮುದ್ರಿಕೆಯಿಟ್ಟು  ಮಾತೆಗೆ  ಅಂದು ಸಂತೋಷಬಡಿಸಿದೆ ।।೨।।

ಜನಕತನುಜೆಯ   ಮನವ  ಹರುಷಿಸಿ  ವನವ ಕಿತ್ತಿದಾಡಿದೆ ।
ಧನುಜರನ್ನು  ಸಡೆದು  ಲಂಕೆಯನನಲಗಾಹುತಿ  ನೀಡಿದೆ ।।೩।।

ಶ್ರೀರಾಮಕಾರ್ಯವ  ವಹಿಸಿ ಅಕ್ಷಕುಮಾರನನು ಸಂಹರಿಸಿದೆ
ಘೋರ  ರಕ್ಕಸವೆಂಬುವರನು  ಮಾರಿವಶವನು ಘೈಸಿದೇ । ।।೪।।

ಭರದಿ ಬಂದು ಶ್ರೀರಾಮಪಾದಕ್ಕೆರಗಿ  ಬಿನ್ನಹ ಮಾಡಿದೆ ।
ಉರಗಗಿರಿ ಹಯವದನನ  ಪರಮಭಕ್ತನೀನೆಂದೆನಿಸಿದೆ ।।೫।।




No comments :

Post a Comment