Pages

Wednesday, January 2, 2013

Enu Dhanyalo

 ಲಕ್ಷ್ಮಿ  ಹಾಡು

ಏನು  ಧನ್ಯಳೋ  ಲಕುಮಿ  ಎಂಥಾ  ಮಾನ್ಯಳೋ ।।ಪ।।
ಸಾನುರಾಗದಿಂದ  ಹರಿಯ  ತಾನೇ  ಸೇವೆ  ಮಾಡುತಿಹಳು ।।ಅ.ಪ।।


ಕೋಟಿ  ಕೋಟಿ  ಭೃತ್ಯರಿರಲು  ಹಾಟಕಾಂಬರನ  ಸೇವೆ
ಸಾಟಿಯಿಲ್ಲದೆ  ಪೂರ್ಣಗುಣನ  ಶ್ರೇಷ್ಟವಾಗಿ  ಮಾಡುತಿಹಳು ।।೧।।  [ಏನು]

ಛತ್ರ  ಚಾಮರ  ವ್ಯಜನ ಪರ್ಯಂಕ  ಪಾತ್ರರೂಪದಲ್ಲಿ  ನಿಂತು
ಚಿತ್ರಚರಿತನಾದ  ಹರಿಯ  ನಿತ್ಯಸೇವೆ  ಮಾಡುತಿಹಳು ।।೨।।  [ಏನು]

ಸರ್ವಸ್ಥಳದಿ  ವ್ಯಾಪ್ತನಾದ  ಸರ್ವದೋಷರಹಿತನಾದ
ಗರುಡಗಮನನು  ಆದ  ಪುರಂದರವಿಠಲನ್ನ  ಸೇವಿಸುವಳು ।।೩।।  [ಏನು]
 

No comments :

Post a Comment