Pages

Thursday, December 13, 2012

Govinda Hari Govinda Keshava

ಕೃಷ್ಣ  ಲೀಲೆ


ಗೋವಿಂದ ಹರಿ   ಗೋವಿಂದ
ಕೇಶವ ಕೃಷ್ಣ  ಜನಾರ್ಧನ।।          ।। ಪ ।।

ಮತ್ಸ್ಯಾವತಾರದೊಳಾಡಿದನೇ
ಮಂದರಾಚಲ  ಬೆನ್ನೊಳು ತಾಳಿದನೆ
ಅಚ್ಚಾಸುಕಾರನಾಗಿ  ಬಾಳಿದನೆ
ಮದಹೆಜ್ಜೆ  ಹಿರಣ್ಯನ  ಸೀಳಿದನೆ ।।       ।।೧।।    ।।ಪ।।  

ಕುಂಬಿನಿ  ದಾನವ ಬೇಡಿದನೆ
ಕ್ಷಾತ್ರರೆಂಬುವನು  ಹತ  ಮಾಡಿದನೆ
ಅಂಬುದಿಗೆ  ಶರ  ಹೂಡಿದನೆ
ಕಮಲಾಂಬಕ  ಗೊಲ್ಲರೊಲಾಡಿದನೇ ।।    ।।೨।। ।।ಪ।।

ವಸುದೇವನುದರದಿ  ಪುಟ್ಟಿದನೆ
ಪೊಲ್ಮೆಸೆವ  ಧನುಜರೊಡಗುಟ್ಟಿದನೆ
ಎಸವ  ಕಾಳಿಂಗನ  ಮೆಟ್ಟಿದನೆ
ಭಾದಿಸುವರ  ಯಮಪುರ  ಕಟ್ಟಿದನೆ।।      ।।೩।।       ।।ಪ।।

ಪೂತನಿಯ  ಮೈಯ  ಸೋಕಿದನೆ
ಮಹಾ  ಘಾತದ  ಮೊಲೆಯುಂಡು ತೇಗಿದನೆ
ಘಾತಕಿಯನತ್ತಾ   ನೂಕಿದನೆ
ಗೋಪವ್ರಾತ  ಗೋಗಳನೆಲ್ಲಾ  ಸಾಕಿದನೆ ।।        ।।೪।।      ।।ಪ।।  

ಸಾಧಿಸಿ  ತ್ರಿಪುರರ  ಗೆಲಿದವನೇ
ಲೇಚರ  ಭೇದಿಸಿ  ಹಯವೇರಿ  ಮೆರೆದವನೇ
ಸಾಧಿಸಿ  ಸಕಲವ   ತಿಳಿದವನೇ
ಬಾಡದಾದಿಕೇಶವ  ಭಕ್ತಿಗೊಲಿದವನೇ  ।।        ।।೫।।      ।।ಪ।।   


 

No comments :

Post a Comment