ಗುರುರಾಜ ಗುರುಸಾರ್ವಭೌಮ
ಗುರುರಾಜ ಗುರುಸಾರ್ವಭೌಮ
ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದ
ಸರಸಿಜ ಯುಗಗಬಿ ನಮಿಸುವೆ ।।
ಕರುಣಾ ಸಾಗರನೆಂದು ಚರಣವ ನಂಬಿದೆ
ಶರಣನ ಪಾಲಿಸೋ ಕರುಣೀಯೇ
ಅನ್ಯರ ಭಜಿಸದೆ ನಿನ್ನನೇ ಭಜಿಸುವೆ
ಎನ್ನ ಮರಿಯೋದಿದು ನ್ಯಾಯವೇ ।।
ನಿನ್ನ ಸೇವಿಪರಿಗೆ ಇನ್ನುಂಟೆ ಭಯ ಶೋಕ
ಉನ್ನತ ಸುಖದೊಳಗೆ ಇರುವರೋ
ನಿನ್ನ ಸೇವಿಸಿ ಭವ ಬನ್ನ ಪಡುವದಿದು
ಎನ್ನ ಅಪರಾಧವೇನಯ್ಯ ।।
ಹಿಂದಿನ ಮಹಿಮದಿಂದೇನು ಎನಗೈಯ್ಯ
ಇಂದು ಮಹಾಮಹಿಮೆ ತೋರಿಸೋ
ನಾತನು ನೀನ್ನಲ್ಲೇ ದೂತನು ನಾನ್ನಲ್ಲೇ
ಯಾತಕ್ಕೆ ಈ ತರ ಮಾಡಿದಿ ।।
ಜ್ಞಾನಿಗಳರಸನೇ ಮೌನಿಶಿರೋಮಣಿ
ದ್ಯಾನವ ಸಂತತ ನೀಡಯ್ಯ
ಸಂತತ ಎನ ಮನೋಂತರದಲಿ ನೀ
ನಿಂತು ಪಾಲಿಸು ಎನ್ನ ಮಹರಾಯ ।।
ನಿನ್ನಲ್ಲಿ ಹರಿದಯ ಉನ್ನತ ಇರಲಿನ್ನು
ಎನ್ನಲ್ಲಿ ನಿನ ದಯ ಇರಲಯ್ಯ
ದಾತಗುರು ಜಗನ್ನಾಥ ವಿಠಲ ನಿನ್ನ
ಮಾತು ಲಾಲಿಸಿದಂತೆ ಪೊರೆಯನ್ನಾ ।।
No comments :
Post a Comment