Pages

Thursday, December 13, 2012

Indu Shukravaara


ಶುಕ್ರವಾರದ  ಹಾಡು


ಸರ್ವ  ಮಂಗಳ  ಮಾಂಗಲ್ಯೇ  ಶಿವೇ  ಸರ್ವಾರ್ಥ  ಸಾಧಿಕೆ
ಶರಣ್ಯೇ ತ್ರ್ಯಮ್ಬಕೆ  ದೇವಿ  ನಾರಾಯಣಿ  ನಮೋಸ್ತುತೆ ।।

ಇಂದು ಶುಕ್ರವಾರ  ಶುಭವ  ತರುವ ವಾರ
ಸುಮಂಗಲಿಯರೆಲ್ಲ  ನಿನ್ನ  ಪೂಜಿಸುವ  ಪುಣ್ಯ ವಾರ ।।         ।।ಇಂದು।।


ಮುಂಜಾನೆಯ   ಮಡಿವುಟ್ಟು  ಕುಂಕುಮವ  ಹಣೆಗಿಟ್ಟು
ರಂಗೋಲಿಯ ಬಾಗಿಲುಗಿಟ್ಟು  ಹಣ್ಣು  ಕಾಯಿ  ನೀಡುವ  ವಾರ ।।    ।।ಇಂದು।।

ಮಲ್ಲಿಗೆ  ಜಾಜಿ  ಹೂಮಾಲೆ  ಹಾಕಿ  ಚಂದನ  ಹಚ್ಚಿ  ಸಿಂಗಾರ  ಮಾಡಿ
ಕರ್ಪುರದಾರಥಿ  ನಿನಗೆ ಬೆಳಗಿ ಭಕ್ತಿಯಿಂದಲಿ  ಭಜಿಸುವ ವಾರ ।।   ।।ಇಂದು।।

ಸೂವಾಸಿನಿಯರಿಗೆ  ಕುಂಕುಮ ಹಚ್ಚಿ ಸಂಭ್ರಮದಿಂದ  ಬಾಗಿನ ನೀಡಿ
ಸರ್ವಮಂಗಳೆಯ  ಕೀರ್ತಿಯ  ಹಾಡಿ  ಸಕಲ ಸಕಲ ಭಾಗ್ಯವ ಬೇಡುವ ವಾರ ।।
                                                                                                     ।।ಇಂದು।।

No comments :

Post a Comment