ರಾಗ-ಆನಂದಭೈರವಿ
ತಾಳ-ಝಂಪೆ
ರಚನೆ-ಶ್ರೀ ಪುರಂದರದಾಸರು
ನಾನೇಕೆ ಬಡವನು ನಾನೇಕೆ ಪರದೇಶಿ
ಶ್ರೀನಿಧೆ ಹರಿ ಎನಗೆ ನೀನಿರುವ ತನಕ (ಪ)
ಪುಟ್ಟಿಸಿದ ತಾಯಿ ತಂದೆ ಇಷ್ಟ ಮಿತ್ರನು ನೀನೆ
ಅಷ್ಟ ಬಂಧುವು ಬಳಗ ಸರ್ವ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣಾ ನೀನಿರುವ ತನಕ (೧)
ಒಡಹುಟ್ಟಿದವ ನೀನೆ ಒಡಲಿಗಾಕುವ ತನಕ
ಉಡಲು ಹೊದಿಯಲು ವಸ್ತ್ರ ಕೊಡುವವ ನೀನೆ
ಮಡದಿ ಮಕ್ಕಳನೆಲ್ಲಾ ಕಡೆಹಾಯಿಸುವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವ ತನಕ (೨)
ವಿದ್ಯೆ ಹೇಳುವವ ನೀನೆ ಬುಧ್ಧಿ ಕಲಿಸುವವ ನೀನೆ
ಉಧ್ಧಾರ ಕರ್ತ ಮಮ ಸ್ವಾಮಿ ನೀನೆ
ಮುದ್ದು ಸಿರಿ ಪುರಂದರ ವಿಟ್ಟಲ ನಿನ್ನಡಿ ಮೇಲೆ
ಬಿದ್ದುಕೊಂಡಿರುವ ಎನಗೇತರ ಭಯವೋ (೩)
ತಾಳ-ಝಂಪೆ
ರಚನೆ-ಶ್ರೀ ಪುರಂದರದಾಸರು
ನಾನೇಕೆ ಬಡವನು ನಾನೇಕೆ ಪರದೇಶಿ
ಶ್ರೀನಿಧೆ ಹರಿ ಎನಗೆ ನೀನಿರುವ ತನಕ (ಪ)
ಪುಟ್ಟಿಸಿದ ತಾಯಿ ತಂದೆ ಇಷ್ಟ ಮಿತ್ರನು ನೀನೆ
ಅಷ್ಟ ಬಂಧುವು ಬಳಗ ಸರ್ವ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣಾ ನೀನಿರುವ ತನಕ (೧)
ಒಡಹುಟ್ಟಿದವ ನೀನೆ ಒಡಲಿಗಾಕುವ ತನಕ
ಉಡಲು ಹೊದಿಯಲು ವಸ್ತ್ರ ಕೊಡುವವ ನೀನೆ
ಮಡದಿ ಮಕ್ಕಳನೆಲ್ಲಾ ಕಡೆಹಾಯಿಸುವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವ ತನಕ (೨)
ವಿದ್ಯೆ ಹೇಳುವವ ನೀನೆ ಬುಧ್ಧಿ ಕಲಿಸುವವ ನೀನೆ
ಉಧ್ಧಾರ ಕರ್ತ ಮಮ ಸ್ವಾಮಿ ನೀನೆ
ಮುದ್ದು ಸಿರಿ ಪುರಂದರ ವಿಟ್ಟಲ ನಿನ್ನಡಿ ಮೇಲೆ
ಬಿದ್ದುಕೊಂಡಿರುವ ಎನಗೇತರ ಭಯವೋ (೩)
No comments :
Post a Comment