Pages

Thursday, February 8, 2018

Yaare Rangana


ರಾಗ : ಹಿಂದೋಳ




ಯಾರೇ ರಂಗನ ಯಾರೇ ಕೃಷ್ಣನ

ಯಾರೇ ಮಥುರೆಗೆ  ಕರೆಯ ಬಂದವರು।।

ಈ ಪರಿಯಿಂದಲಿ ಕರೆಯ ಬಂದವರು ।

ಗೋಪಾಲಕೃಷ್ಣನ ಪಾಪವಿನಾಶನ

ಈ ಪರಿಯಿಂದಲಿ ಕರೆಯ ಬಂದವರು ।೧। ।ಯಾರೇ।

ವೇಣು ವಿನೋದನ ಪ್ರಾಣ ಪ್ರಿಯನ

ಜಾಣೆಯರರಸನ  ಕರೆಯ ಬಂದವರು ।೨।  ।ಯಾರೇ।

ಕರಿರಾಜ ವರದನ ಪರಮ ಪುರುಷನ

ಪುರಂದರ ವಿಠಲನ  ಕರೆಯ ಬಂದವರು ।೩।  ।ಯಾರೇ।

No comments :

Post a Comment