Pages

Friday, November 20, 2015

Enu Helali Tangi











racane: shrI puraMdaradAsaru

Enu hELali taMgi timmayyana pAdavanu kaMDe /pa/
kanasu kaMDene manadali kaLavaLagoMDene /anupa/


honnada  kaDagavanniTTu timmayya tA kOlva nAmaviTTu
aMduge ghalukenuta enna muMde baMdu niMtiddanalle /1/

muttina pallakki yatigaLu hottu niMtiddaralle
Chatra cAmaradiMda raMgayyana utsava mUrutiya /2/

tAmara kamaladalli kRuShNayya tA baMdu niMtiddanalle
vAyu bommAdigaLu raMgayyana sEveya mADuvare /3/

navaratna kettisida svAmi enna hRudaya maMTapadalli
sarvAbharaNadiMda puraMdara viThThalana kooDidane /4/



Lyrics In Kannada:

ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ
ಏನು ಪೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪ||

ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ
ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ
ಎನ್ನ  ಮುಂದೆ ಬಂದು ನಿಂತಿದ್ದನಲ್ಲೆ || ೧ ||

ಮಕರಕುಂಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನ್ನುತ 
ಸ್ವಾಮಿ ತಾ ಬಂದು ನಿಂತಿದ್ದನಲ್ಲೆ || ೨ ||

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೆ ಛತ್ರ ಚಾಮರದಿಂದ
ರಂಗಯ್ಯನ ಉತ್ಸವ ಮೂರುತಿಯ || ೩ ||

ತಾಮರ ಕಮಲದಲ್ಲಿ  ಕೃಷ್ಣಯ್ಯ ತಾ
ಬಂದು ನಿಂತಿದ್ದನಲ್ಲೆ ವಾಯು ಬೊಮ್ಮಾದಿಗಳು
ರಂಗಯ್ಯನ ಸೇವೆಯ ಮಾಡುವರೆ || ೪ ||

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮಂಟಪದಲ್ಲಿ ಸರ್ವಾಭರಣದಿಂದ
ಪುರಂದರವಿಠಲನ ಕೂಡಿದೆನೆ || ೫ ||

Audio Link:
https://enu-helali-tangi






2 comments :