ರಚನೆ : ಶ್ರೀ ವಲ್ಲಭಾಚಾರ್ಯ
ಅಧರಂ ಮಧುರಂ ವದನಂ ಮಧುರಂ ।
ನಯನಂ ಮಧುರಂ ಹಸಿತಂ ಮಧುರಂ ।
ಹೃದಯಂ ಮಧುರಂ ಗಮನಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ ।।೧।।
ಹೇ ಮಧುರಾಧಿಪತಿ ಶ್ರೀ ಕೃಷ್ಣ , ನಿನ್ನ ಅಧರ ( ತುಟಿ), ಮುಖ , ಕಣ್ಣು ,ನಗು , ಹೃದಯ ,ನಡಿಗೆ ಎಲ್ಲವೂ ಮಧುರ .
ವಚನಂ ಮಧುರಂ ಚರಿತಂ ಮಧುರಂ
ವಸನಂ ಮಧುರಂ ವಲಿತಂ ಮಧುರಂ ।
ಚಲಿತಂ ಮಧುರಂ ಭ್ರಮಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ ।।೨।।
ಹೇ ಮಧುರಾಧಿಪತಿ ! ನಿನ್ನ ಮಾತು , ನಿನ್ನ ಚರಿತ್ರೆ , ನಿನ್ನ ವಸ್ತ್ರ , ನಿನ್ನ ಸಂಕೇತ , ನಿನ್ನ ಚಲನೆ , ನಿನ್ನ ಭ್ರಮಣೆ ಎಲ್ಲವೂ ಮಧುರ .
ವೇಣು-ರ್ಮಧುರೋ ರೇಣು-ರ್ಮಧುರಃ
ಪಾಣಿ-ರ್ಮಧುರಃ ಪಾದೌ ಮಧುರೌ ।
ನೃತ್ಯಂ ಮಧುರಂ ಸಖ್ಯಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ ।।೩।।
ಹೇ ಮಧುರಾಧಿಪತಿ ! ನಿನ್ನ ಕೊಳಲು, ನಿನ್ನ ಚರಣದ ಧೂಳು , ನಿನ್ನ ಕೈಗಳು, ನಿನ್ನ ಪಾದಗಳು, ನಿನ್ನ ನಾಟ್ಯ , ನಿನ್ನ ಗೆಳೆತನ ಎಲ್ಲವೂ ಮಧುರ .
ಗೀತಂ ಮಧುರಂ ಪೀತಂ ಮಧುರಂ
ಭುಕ್ತಂ ಮಧುರಂ ಸುಪ್ತಂ ಮಧುರಂ ।
ರೂಪಂ ಮಧುರಂ ತಿಲಕಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ।।೪।।
ಹೇ ಮಧುರಾಧಿಪತಿ ! ನಿನ್ನ ಗೀತೆ ,ನೀನು ಕುಡಿಯುವ ಶೈಲಿ , ನೀನು ಆಹಾರ ಸೇವಿಸುವ ರೀತಿ , ನಿನ್ನ ನಿದ್ರೆ,ನಿನ್ನ ಸುಂದರವಾದ ರೂಪ , ನಿನ್ನ ತಿಲಕ ಎಲ್ಲವೂ ಮಧುರ .
ಕರಣಂ ಮಧುರಂ ತರಣಂ ಮಧುರಂ
ಹರಣಂ ಮಧುರಂ ಸ್ಮರಣಂ ಮಧುರಂ ।
ವಮಿತಂ ಮಧುರಂ ಶಮಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ।।೫।।
ಹೇ ಮಧುರಾಧಿಪತಿ ! ನಿನ್ನ ಕಾರ್ಯಗಳು ಮಧುರ ,ನೀನು ವಿಮೋಚಿಸುವ ರೀತಿ ಮಧುರ , ನಿನ್ನ ಕಳ್ಳತನಗಳು ಮಧುರ , ನಿನ್ನ ಸ್ಮರಣೆ ಮಧುರ , ನಿನ್ನ ಕಾಣಿಕೆಗಳು ಮಧುರ , ನಿನ್ನ ಹೊಳಪು ಮಧುರ .
ಗುಂಜಾ ಮಧುರಾ ಮಾಲ ಮಧುರಾ
ಯಮುನಾ ಮಧುರಾ ವೀಚೀ ಮಧುರಾ ।
ಸಲಿಲಂ ಮಧುರಂ ಕಮಲಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ।।೬।।
ಹೇ ಮಧುರಾಧಿಪತಿ ! ನಿನ್ನ ಕುತ್ತಿಗೆಯ ಹಾರ, ನಿನ್ನ ಮಾಲೆ, ಯಮುನಾ ನದಿ ,ಅದರ ತೆರೆಗಳು ಅದರ ನೀರು , ಅಲ್ಲಿರುವ ಕಮಲಾ ಎಲ್ಲವೂ ಮಧುರ .
ಗೋಪಿ ಮಧುರಾ ಲೀಲಾ ಮಧುರಾ
ಯುಕ್ತಂ ಮಧುರಂ ಮುಕ್ತಂ ಮಧುರಂ ।
ದೃಷ್ಟಂ ಮಧುರಂ ಶಿಷ್ತಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ।।೭।।
ಹೇ ಮಧುರಾಧಿಪತಿ ! ನಿನ್ನ ಗೆಳೆತಿಯರಾದ ಗೋಪಿಕಾಸ್ತ್ರೀಯರು , ನಿನ್ನ ಲೀಲೆಗಳು ,ನಿನ್ನ ಸ್ನೇಹ ,
ನಿನ್ನ ರಕ್ಷಣಾಕಾರ್ಯ ,ನಿನ್ನ ನೋಟ , ನಿನ್ನ ವಿನಯತೆ ಎಲ್ಲವೂ ಮಧುರ .
ಗೋಪಾ ಮಧುರಾ ಗಾವೋ ಮಧುರಾ
ಯಷ್ಟಿ-ರ್ಮಧುರಾ ಸೃಷ್ಟಿ-ರ್ಮಧುರಾ ।
ದಲಿತಂ ಮಧುರಂ ಫಲಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಂ।।೮।।
ಹೇ ಮಧುರಾಧಿಪತಿ ! ನಿನ್ನ ಗೆಳೆಯರಾದ ಗೋಪರು , ನಿನ್ನ ಹಸುಗಳು ,ನಿನ್ನ ಬಡಿಗೆ , ನಿನ್ನ ಸೃಷ್ಟಿ , ನಿನ್ನ ವಿಜಯ , ನಿನ್ನ ಸಾಧನೆಗಳು ಎಲ್ಲವೂ ಮಧುರ .
।। ಇತಿ ಶ್ರೀಮದ್ವಲ್ಲಭಾಚಾರ್ಯ ವಿರಚಿತ ಮಧುರಾಷ್ಟಕಂ ಸಂಪೂರ್ಣಂ ।।
No comments :
Post a Comment