ನರಸಿಂಹನ ಪಾದ ಭಜನೆಯ ಮಾಡೋ ||ಪ ||
ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ||
ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೇ ಹರಿ.....
ವರ ಕಂಭದಿಂದ ಬಂದ ಸಿರಿ ನರಹರಿ ನಮ್ಮ ||
ತರಳನ ಮೊರೆ ಕೇಳಿ ತ್ವರಿತದಿಂದಲಿ ಬಂದು
ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ ||
ವರ ವಿರಿಂಚಾದ್ಯರು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರವಿಠಲ ||
Audio Link:
Narasimhana paada _song-5
No comments :
Post a Comment