Pages

Tuesday, September 2, 2014

Nammamma SharadE

ರಚನೆ : ಕನಕದಾಸರು
ರಾಗ : ಮೋಹನ
ತಾಳ : ಆಟ




ನಮ್ಮಮ್ಮ ಶಾರದೆ ಉಮಾ  ಮಹೇಶ್ವರಿ  ನಿಮ್ಮೊಳಗಿಹನಾರಮ್ಮ
ಕಮ್ಮಗೋಲನವೈರಿ  ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೇ   ಅಮ್ಮಯ್ಯ ।। (ನಮ್ಮಮ್ಮ)


ಮೋರೆ  ಕಪ್ಪಿನ ಭಾವ ಮೊರದಗಲದ  ಕಿವಿ ಕೋರೆದಾಡೆಯನಾರಮ್ಮ ।
ಮೂರು ಕಣ್ಣನ ಸುತ ಮುರಿದಿಟ್ಟ  ಚಂದ್ರನ ಧೀರ ತಾ ಗಣನಾಥನೇ  ಅಮ್ಮಯ್ಯ ।। (ನಮ್ಮಮ್ಮ )


ಉಟ್ಟ  ದಟ್ಟಿಯು  ಬಿಗಿದುಟ್ಟ  ಚಲ್ಲಣದ  ದಿಟ್ಟ ತಾ  ನಿವನಾರಮ್ಮ।
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ   ಅಮ್ಮಯ್ಯ ।। (ನಮ್ಮಮ್ಮ)


ರಾಶಿ  ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ  ಭಾಷಿಗನಿವನಾರಮ್ಮ ।
ಲೇಸಾಗಿ ಜನರ ಸಲಹುವ ಕಾಗಿ ನೆಲೆಯಾದಿ  ಕೇಶವ ದಾಸ ಕಣೇ  ಅಮ್ಮಯ್ಯ ।। (ನಮ್ಮಮ್ಮ )


 

No comments :

Post a Comment