ರಥವಾನೇರಿದ ರಾಘವೇಂದ್ರ
ರಚನೆ : ಗೋಪಾಲದಾಸರು
ರಾಗ : ಪೂರ್ವಿ
ತಾಳ : ಆದಿ
ಸತತ ಮಾರ್ಗದಿ ಸಂತತ ಸೇವಿಪರಿಗೆ । ಅತಿ
ಹಿತದಲಿ ಮನೋರಥವ ಕೊಡುವೆನೆಂದು । ।।ಪ ।।
ರಥವಾನೇರಿದ ರಾಘವೇಂದ್ರ । ಸದ್ಗುಣಗಳ ಸಾಂದ್ರ ।।ಅ.ಪ ।।
ಚತುರ ದಿಕ್ಕು ವಿದಿಕ್ಕುಗಳಲ್ಲಿ । ಚರಿಪಾಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ । ವರವಾ ಬೇಡುತಲಿ
ನುತಿಸುತ ಪರಿಪರಿ ನತರಾಗಿಹರಿಗೆ
ಗತಿಪೇಳದೆ ಸರ್ವಥಾ ನಾ ಬಿಡೆನೆಂದು ।।೧।।
ಅತುಳ ಮಹಿಮಾನಾ ದಿನದಲ್ಲಿ ।ದಿತಿಜಾವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ । ಉತ್ತಮ ರೀತಿಯಲ್ಲಿ
ಅತಿಶಯವಿರುತಿರೆ ಪಿತನ ಭಾದೆಗಳು
ಅತಿಶಯವಿರುತಿರೆ ಪಿತನ ಭಾದೆಗೆ ಮ -
ನ್ಮಥ ಪಿತನೊಲಿಸಿದ ಜಿತ ಕರುಣದಲಿ ।।೨।।
ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ । ಯತಿರಾಘವೇಂದ್ರ .... ಗುರುರಾಘವೇಂದ್ರ
ಪತೀತರೋದ್ಧಾರಿಯೇ ಪಾವನಕಾರಿಯೇ ।ಕರಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ....... ವಿಠಲ .... ಗೋಪಾಲವಿಠಲ
ಪ್ರತಿ ಮಂತ್ರಾಲಯದೊಳು ಅತಿ ಮೆರೆವ ।।೩।।
song link :
rathava-nerida-raghavendra-by-puttur-narasimha-nayak
No comments :
Post a Comment