Pages

Wednesday, December 12, 2012

Raghupathi priya sri gunaganadhama

ಹನುಮಗೆ  ಆರುತಿ



ರಘುಪತಿ  ಪ್ರಿಯ  ಶ್ರೀ  ಗುಣಗಣಧಾಮ
ಆರತಿ  ಬೆಳಗುವೆ  ಶುಭಕರ  ಹನುಮ   |ಪ|

ಶ್ರೀಹರಿ  ಹೃದಯದಿ  ನೆಲಸಿಹ  ಹನುಮ
ಸೂರ್ಯನ  ಹಿಡಿಯಲು ಹಾರಿದ ಹನುಮ
ವಾಯುಲಂಘನ  ಶುಭ  ಗುಣಗಣಧಾಮ
ಶ್ರೀರಾಮಧೂತ  ದಯಾಗುಣ  ಹನುಮ  ||ಆರತಿ||


ನಾರದ  ಗರ್ವವ ಅಳಿಸಿದ  ಹನುಮ
ನಾದೋಂಕಾರವ  ಅರಿತ  ಬ್ರಹ್ಮ
ಏಳೇಳು  ಶರದಿಯ  ದಾಟಿದ  ಹನುಮ
ಶ್ರೀ  ವಾಯುತನಯ  ನಮೋ  ನಮೋ ಹನುಮ  ||ಆರತಿ||

ಸೀತೆಯ  ಇರುವನು  ಹುಡಿಕಿದ  ಹನುಮ
ರಾಮ  ಮುದ್ರಿಕೆಯ  ನೀಡಿದ  ಹನುಮ
ಸೀತಾ ಶೋಕವ ನೀಗಿದ ಹನುಮ
ಶ್ರೀ ವಾಯುತನಯ   ನಮೋ ನಮೋ   ಹನುಮ  ||ಆರತಿ||

ರಾವಣ ದರ್ಪ ವಿನಾಶಕ  ಹನುಮ
ಸೂರ್ಯನ ಶಿಷ್ಯನೇ ವರಕರ  ಹನುಮ
ಭೂತಪ್ರೇತ  ಭಯ ನೀಗಿಪ  ಹನುಮ
ಅಂಜನ ಕುವರ ನಮೋ ನಮೋ ಹನುಮ   ||ಆರತಿ||

ರತ್ನಕುಂಡಲಧರ  ಜಯ  ಜಯ  ಹನುಮ
ಸಕಲ  ವಿದ್ಯಾನಿಧೇ  ಕಪಿಕುಲ ಹನುಮ
ವಜ್ರ ಶರೀರ  ಜಯ  ಜಯ ಹನುಮ
ಕೇಸರಿ ಸುತನೇ  ನಮೋ ನಮೋ ಹನುಮ  ||ಆರತಿ||

ನಾಲ್ಕು ಯುಗದಲು ಮೆರದಾ  ಹನುಮ
ರಾಮನಿಗೆದಿರು  ಸೆಣಸಿದ  ಹನುಮ
ಮಂಗಳ ಮಂಗಳ ಮಂಗಳ  ಹನುಮ
ರಘುಪತಿ ಪ್ರಿಯ  ಶ್ರೀ  ಗುಣಗಣ  ಧಾಮ  ||ಆರತಿ||


No comments :

Post a Comment